
ನವದೆಹಲಿ[ಮಾ.02]: ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಯಾವುದೇ ಉಗ್ರರು ಸಾವನ್ನಪ್ಪಿಲ್ಲ. ಭಾರತ ಹೇಳಿದಂತೆ ಬಾಲಾಕೋಟ್‌ನಲ್ಲಿ ಯಾವುದೇ ಉಗ್ರ ನೆಲೆಗಳು ಇಲ್ಲ ಎಂದು ವಾದಿಸುತ್ತಿದ್ದ ಪಾಕಿಸ್ತಾನ, ಇದೀಗ ತನ್ನ ವಾದವನ್ನು ಸಮರ್ಥಿಸಲು ಹೊಸ ತಂತ್ರ ರೂಪಿಸಿದೆ.
ಭಾರತ ನಡೆಸಿದ ದಾಳಿಯ ವೇಳೆ ಅರಣ್ಯದಲ್ಲಿ ಪೈನ್ ಮರಗಳು ಹಾನಿಯಾಗಿವೆ. ಇದು ಜೈವಿಕ ಭಯೋತ್ಪಾದನೆ ಎಂದು ವಿಶ್ವಸಂಸ್ಥೆಗೆ ದೂರು ನೀಡಲು ಪಾಕಿಸ್ತಾನ ನಿರ್ಧರಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನ ಹವಾಮಾನ ಬದಲಾವಣೆ ಖಾತೆ ಸಚಿವ ಮಲಿಕ್ ಅಮೀನ್ ಇಸ್ಲಾಮ್, ಭಾರತದ ವಾಯುದಾಳಿಯಿಂದ ನಮ್ಮ ರಕ್ಷಿತ ಅರಣ್ಯ ನಾಶವಾಗಿದೆ. ದಾಳಿಯಿಂದ ಅಪಾರ ಪ್ರಮಾಣ ಪೈನ್ ಮರಗಳು ಧರೆಗುರುಳಿವೆ. ಇದರಿಂದ ಪರಿಸರ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಭಾರತ ನಡೆಸಿದ್ದು ಜೈವಿಕ ಭಯೋತ್ಪಾದನೆ. ಹೀಗಾಗಿ ದಾಳಿಯಿಂದ ಅರಣ್ಯಕ್ಕೆ ಆಗಿರುವ ಹಾನಿಯ ಅಂದಾಜು ಮಾಡಲಾಗುತ್ತಿದೆ. ಈ ಕುರಿತ ವರದಿ ನಮ್ಮ ಕೈ ಸೇರಿದ ಬಳಿಕ ನಾವು ವಿಶ್ವಸಂಸ್ಥೆ ಮತ್ತು ಇತರೆ ವೇದಿಕೆಗಳಿಗೆ ಈ ಕುರಿತು ದೂರು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.