
ಮಂಗಳೂರು(ನ.19): 500 ಮತ್ತು 1000 ರೂಗಳನ್ನ ರದ್ದು ಮಾಡಿದ್ದು ಮೋದಿಯವರ ದೂರದೃಷ್ಟಿ ಇಲ್ಲದ ನಿರ್ಧಾರ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ಧಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಅಪ್ರತಿಮ ನಾಯಕಿ, ಉಕ್ಕಿನ ಮಹಿಳೆ ಎಂದು ಕರೆಸಿಕೊಂಡವರು. ಬ್ಯಾಂಕ್ ರಾಷ್ಟ್ರೀಕರಣಗೊಳಿಸಿದಾಗ ಬಡವರಿಗೆ, ದೀನದಲಿತರಿಗೆ ಬ್ಯಾಂಕ್ ತೆರೆಯಲ್ಪಟ್ಟಿತು. ಎಲ್ಲರಿಗೂ ಅನುಕೂಲವಾಗುವ ನಿರ್ಧಾರ ತೆಗೆದುಕೊಂಡರು.ಆದರೆ, ಮೋದಿ ನೋಟುನಲಗಲಿ ಕೂಡ ಮನ್ ಕಿ ಬಾತ್ ಆರಂಭಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ನೋಟು ನಿಷೇಧಕ್ಕೆ ವಿರೋಧವಿಲ್ಲ. ಆದರೆ, ಮೋದಿಗೆ ದೂರದೃಷ್ಟಿ ಇಲ್ಲದಿರುವುದಕ್ಕೆ ನಮ್ಮ ವಿರೋಧ, ಪೂರ್ವ ಸಿದ್ದತೆಯಿಲ್ಲದೆ ನೋಟು ನಿಷೇಧ ಮಾಡಿದ್ದು, ಕಪ್ಪು ಕುಳಗಳಿಗೆ ನಿದ್ದೆಗೆಡಿಸಿದಲ್ಲ. ಬಡವರು, ವ್ಯಾಪಾರಿ ಗಳು, ರೈತರ ನಿದ್ದೆಗೆಡಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇವೇಳೆ, ಎಟಿಎಂ ಎದುರು ಕಪ್ಪು ಕುಳ ಕ್ಯೂ ನಿಂತಿಲ್ಲ, ಬಡವರು ಕ್ಯೂ ನಿಂತಿದ್ದಾರೆ. ಇದು ತುಘಲಕ್ ಸರ್ಕಾರದ ದರ್ಬಾರ್ ಎಂದು ಆಲೋಚಿಸಬೇಕಾಗಿದೆ. ೪೨ ಜನ ಸತ್ತಿದ್ದಾರೆ. ದೂರಾಲೋಚನೆ ಮಾಡಿದ್ದರೆ ಈ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ. ಇಂದಿರಾಗಾಂಧಿಗೆ ಇದ್ದ ದೂರದೃಷ್ಟಿ ಮೋದಿಗಿಲ್ಲ. ದೂರದೃಷ್ಟಿ ಕೊರತೆಯಿಂದ ಸಾಮಾನ್ಯ ಜನ ಬವಣೆಪಡುತ್ತಿದ್ದಾರೆ. ಇದಕ್ಕೆ ಮೋದಿ ಸರಕಾರ ನೇರ ಕಾರಣ ಎಂದು ಸಿದ್ದರಾಮಯ್ಯ ದೂರಿದ್ದಾರೆ. ಹಣ ವಿನಿಮಯದ ವೇಳೆ ಒಟ್ಟು 42 ಮಂದಿ ಸಾವನ್ನಪ್ಪಿದ್ದಾರೆ. ನೋಟು ವಿಚಾರದಲ್ಲಿ ರಾಜ್ಯದ ಲ್ಲಿ ಸಾವನ್ನಪ್ಪಿರುವವರಿಗೆ ರಾಜ್ಯದಿಂದ ಪರಿಹಾರ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದರು.
ಇದೇವೇಳೆ,ಕೆಲ ಘೋಷಣೆಗಳನ್ನ ಮಾಡಿದ ಸಿಎಂ, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ರೈತರ ಹಾಲಿಗೆ ಪ್ರೋತ್ಸಾಹ ಧನವನ್ನು 5 ರೂ.ಗೆ ಏರಿಕೆ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.