
ನವದೆಹಲಿ(ನ. 19): ಮೋದಿ ಸರಕಾರ ನವೆಂಬರ್ 8ರಂದು ಅಚಾನಕ್ಕಾಗಿ ನೋಟು ರದ್ದುಗೊಳಿಸುವ ಕ್ರಮವನ್ನು ಘೋಷಿಸಿ ದೇಶದ ಜನತೆಗೆ ಶಾಕ್ ಕೊಟ್ಟರು. ಕಾಳಧನಿಕರನ್ನು ಸದೆಬಡಿಯಲು ಸರಕಾರ ದಿಟ್ಟ ನಿರ್ಧಾರ ಕೈಗೊಂಡಿತೆಂದು ಒಂದು ವಲಯ ಸಂತಸ ಪಟ್ಟರೆ, ಯಾವುದೇ ಪೂರ್ವತಯಾರಿ ಇಲ್ಲದೇ ಕ್ರಮ ಕೈಗೊಂಡು ಜನಸಾಮಾನ್ಯರಿಗೆ ಅನಗತ್ಯ ತೊಂದರೆ ಕೊಡಲಾಗುತ್ತಿದೆ ಎಂದು ಮತ್ತೊಂದು ವಲಯ ಆರೋಪಿಸುತ್ತಿದೆ. ಇದೇನೇ ಇರಲಿ, ದೇಶದ ಕರೆನ್ಸಿಯ ಅಪಮೌಲ್ಯಗೊಳಿಸುವ ನಿರ್ಧಾರ ಕೈಗೊಂಡಿದ್ದು ಇದೇ ಮೊದಲಲ್ಲ. ಅನೇಕ ರಾಷ್ಟ್ರಗಳಲ್ಲಿ ಇಂಥ ಪ್ರಯೋಗಗಳು ನಡೆದಿವೆ. ಅಂಥ 5 ರಾಷ್ಟ್ರಗಳು ಇಲ್ಲಿವೆ.
1) ಘಾನಾ: 1982
ಹಣದ ಹರಿವು ನಿಯಂತ್ರಿಸುವ ಸಲುವಾಗಿ ಘಾನಾ ದೇಶವು 1982ರಲ್ಲಿ 50 ಚೆಡಿ ಮೌಲ್ಯದ ನೋಟನ್ನು ರದ್ದು ಮಾಡಿತು.
2) ನೈಜೀರಿಯಾ: 1984
ಭ್ರಷ್ಟಾಚಾರ ನಿಗ್ರಹದ ಪ್ರಯತ್ನವಾಗಿ ಹೊಸ ಮೌಲ್ಯದ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಲಾಯಿತು.
3) ಮಯನ್ಮಾರ್: 1987
ಕಪ್ಪುಹಣ ವಿಪರೀತವಾದಾಗ ಈ ಕ್ರಮ ಕೈಗೊಳ್ಳಲಾಗಿತ್ತು. ಚಲಾವಣೆಯಲ್ಲಿದ್ದ ಶೇ. 80ರಷ್ಟು ಕರೆನ್ಸಿ ನೋಟನ್ನು ಸರಕಾರ ರದ್ದುಗೊಳಿಸಿ ಶಾಕ್ ನೀಡಿತ್ತು.
4) ಸೋವಿಯತ್ ಒಕ್ಕೂಟ: 1991
ಭಾರೀ ಪ್ರಮಾಣದ ರೂಬೆಲ್ ನೋಟುಗಳನ್ನು ಹಿಂಪಡೆದುಕೊಳ್ಳಲಾಗಿತ್ತು. ಈ ಕರೆನ್ಸಿಗೆ ಹೆಚ್ಚು ಮೌಲ್ಯ ಒದಗಿಸುವ ಉದ್ದೇಶದಿಂದ ಆ ಕ್ರಮ ಕೈಗೊಳ್ಳಲಾಗಿತ್ತು.
5) ಆಸ್ಟ್ರೇಲಿಯಾ:
ನಕಲಿ ನೋಟುಗಳನ್ನು ತಡೆಯುವ ಸಲುವಾಗಿ ಹಳೆಯ ಕರೆನ್ಸಿಯನ್ನು ರದ್ದುಗೊಳಿಸಿ ಹೊಸ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.