ಸುಮಲತಾಗೆ ಮಂಡ್ಯ ಟಿಕೆಟ್: ನೋ ವೇ, ಚಾನ್ಸೇ ಇಲ್ಲ!

Published : Mar 05, 2019, 12:20 PM ISTUpdated : Mar 05, 2019, 12:48 PM IST
ಸುಮಲತಾಗೆ ಮಂಡ್ಯ ಟಿಕೆಟ್: ನೋ ವೇ, ಚಾನ್ಸೇ ಇಲ್ಲ!

ಸಾರಾಂಶ

ಮಂಡ್ಯದಿಂದ ಸುಮಲತಾಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜೆಡಿಎಸ್‌ಗೆ ಬಿಟ್ಟು ಕೊಡಲು ನಿರ್ಧಾರ | ಪಕ್ಷೇತರರಾಗಿ ನಿಲ್ಲುವುದು ಸುಮಲತಾಗೆ ಬಿಟ್ಟ ವಿಚಾರ ಎಂದ ಮಾಜಿ ಸಿಎಂ ಸಿದ್ದರಾಮಯ್ಯ 

ಹುಬ್ಬಳ್ಳಿ (ಮಾ. 05):  ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ನಿರ್ಧಾರವಾಗಿದೆ.  ಸುಮಲತಾ ಪಕ್ಷೇತರರಾಗಿ ನಿಲ್ಲುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು  ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. 

ಮಾಜಿ ಸಿಎಂ ಕಾಲಿಗೆ ನಮಸ್ಕರಿಸಿದ ಮೋದಿ!: ವಿಡಿಯೋ ವೈರಲ್

ಈಗಾಗಲೇ ಹಾಲಿ ಜೆಡಿಎಸ್ ಸಂಸದರಿದ್ದಾರೆ. ಹಾಲಿ ಜೆಡಿಎಸ್ ಇರುವಾಗ ಟಿಕೆಟ್ ಕೇಳಲು ಬರುವುದಿಲ್ಲ. ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮೈತ್ರಿ ಹೆಚ್ಚು ಸ್ಥಾನದಿಂದ ಗೆಲುವು ಸಾಧಿಸಲಿದೆ. ಹಾಗಾಗಿ ಮಂಡ್ಯವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಿದ್ದೇವೆ. ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಅಂತಿಮ ನಿರ್ಧಾರವಾಗಲಿದೆ’ ಎಂದಿದ್ದಾರೆ.  

ಕಾಂಗ್ರೆಸ್‌, ಜೆಡಿಎಸ್‌ ಸೀಟು ಹಂಚಿಕೆ ಸಭೆ ವಿಫಲ; ಹೈ ಕಮಾಂಡ್ ಅಂತಿಮ ನಿರ್ಧಾರ

ಉಮೇಶ್ ಜಾಧವ್ ರಾಜೀನಾಮೆ ಅಂಗಿಕಾರ ಆಗುವುದು ಕಷ್ಟ‌. ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಈಗ ಆಪರೇಷನ್ ಕಮಲಕ್ಕೆ‌ ಬಲಿಯಾಗಿದ್ದಾರೆ. ಗೋಕಾಕ್ ಶಾಸಕ,  ಜಾಧವ್, ನಾಗೇಂದ್ರ, ಮಹೇಶ್ ಕುಮಟಳ್ಳಿ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ. ಪಕ್ಷಾಂತರ ಕಾಯ್ದೆ ವಿರುದ್ಧ ಕ್ರಮ ಜರುಗಿಸಿ ಎಂದು ನಾನೇ ದೂರು ನೀಡಿದ್ದೇನೆ ಎಂದಿದ್ದಾರೆ.  

ಪಕ್ಷಾಂತರ ನಿಷೇಧ ಕಾಯ್ದೆ ಇವರಿಗೂ ಅನ್ವಯಿಸುತ್ತದೆ. ಅಲ್ಲದೇ ಸ್ಪೀಕರ್ ರಾಜೀನಾಮೆ ಅಂಗಿಕಾರ ಮಾಡುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಇವರೆಲ್ಲ ಪಕ್ಷಾಂತರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಾಧವ್ ವಿಷಯದಲ್ಲಿ 25-30 ಕೋಟಿ ವ್ಯವಹಾರ ನಡೆದಿದೆ. ಹಾಗಂತ ನಾನು ಹೇಳುತ್ತಿಲ್ಲ. ರಾಜ್ಯದ ಜನ ಮಾತನಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ