
ಗಾಂಧಿನಗರ[ಮಾ.05]: ಗುಜರಾತ್ ನ ನ್ಯಾಯಾಲಯವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಗುಜರಾತ್ ನ ಮಾಜಿ ಸಿಎಂ ಕೇಶುಭಾಯಿ ಪಟೇಲ್ ಇಬ್ಬರನ್ನೂ ಆಹ್ವಾನಿಸಲಾಗಿತ್ತು. ವೇದಿಕೆ ಏರಿದ ಮೋದಿ ಎಂದಿನಂತೆ ಉಪಸ್ಥಿತರಿದ್ದ ಗಣ್ಯರಿಗೆ ಕೈ ಮುಗಿದು ವಂದಿಸುತ್ತಿದ್ದರು. ಆದ್ರೆ ಮಾಜಿ ಸಿಎಂ ಕೇಶುಭಾಯಿ ಬಳಿ ತಲುಪುತ್ತಿದ್ದಂತೆಯೇ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
ಸುದ್ದಿ ಏಜೆನ್ಸು ANI ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ಗಾಂಧಿನಗರ ಜಿಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಗುಜರಾತ್ ನ ಮಾಜಿ ಸಿಎಂ ಕಾಲಿಗೆ ನಮಸ್ಕರಿಸುತ್ತಿರುವುದನ್ನು ನೋಡಬಹುದು. ಇದೇ ಸಂದರ್ಭದಲ್ಲಿ ಮೋದಿ ಕೇಶುಬಾಯಿ ಜೊತೆಗೆ ಮಾತನಾಡಿದ್ದಾರೆ. ಮೋದಿ ಕಾಳಿಗೆ ನಮಸ್ಕರಿಸುತ್ತಯಿದ್ದಂತೆಯೇ ಮಾಜಿ ಸಿಎಂ ಮುಖದಲ್ಲಿ ವಿಭಿನ್ನ ಭಾವ ಕಾಣಿಸಿಕೊಂಡಿದೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ ಅಹಮದಾಬಾದ್ ನಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಮುಗಿಸಿ ಸಂಹಜೆ ಹೊತ್ತು ರಾಯ್ ಸೇನ್ ಹಳ್ಳಿಗೆ ತೆರಳಿದ್ದ ಪ್ರಧಾನಿ ಅಲ್ಲಿ ತಮ್ಮ 90ರ ಹರೆಯದ ತಾಯಿ ಹೀರಾ ಬೆನ್ ರನ್ನು ಭೇಟಿಯಾಗಿದ್ದರು. ಹೀರಾ ಬೆನ್ ಮೋದಿಯವರ ಕಿರಿಯ ಸಹೋದರನೊಂದಿಗಿದ್ದಾರೆ. ಇಲ್ಲಿ ಮೋದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸುಮಾರು 30 ನಿಮಿಷ ಮಾತುಕತೆ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.