ಕಣ್ಣು ತೆರೆದು ನೋಡಿ ಮಾತಾಡಿದ ಸಿದ್ಧಗಂಗಾ ಶ್ರೀ

By Web DeskFirst Published Jan 8, 2019, 11:02 AM IST
Highlights

ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ. ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋ ಟಾಕ್ಸಿನ್ ಮತ್ತು ಬ್ಯಾಕ್ಟೀ ರಿಯಾಗಳಿದ್ದು, ಅದನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹ ಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನ ಕೈಗೊಳ್ಳಲಾಗಿದೆ.

ತುಮಕೂರು: ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಇದೀಗ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಪ್ಲಾಸ್ಮಾ ಅಲ್ಟ್ರಾ ಫಿಲ್ಟ್ರೇಷನ್ ಚಿಕಿತ್ಸೆ ಮೂಲಕ ರಕ್ತ ಶುದ್ಧೀಕರಣ ಮಾಡುತ್ತಿದ್ದಾರೆ.

 ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋ ಟಾಕ್ಸಿನ್ ಮತ್ತು ಬ್ಯಾಕ್ಟೀ ರಿಯಾಗಳಿದ್ದು, ಅದನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹ ಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನ ಕೈಗೊಳ್ಳಲಾಗಿದೆ.

ಶ್ರೀಗಳ ಆರೋಗ್ಯ ಜವಾಬ್ದಾರಿ ಹೊತ್ತ ಮೊಹ್ಮದ್ ರೇಲಾ ಯಾರು?

ಇದರಿಂದ ಸ್ವಾಮೀಜಿ ಭಾನುವಾರ ರಾತ್ರಿಯಿಂದ ಸಾಕಷ್ಟು ಚೇತರಿಕೆ ಕಂಡಿದ್ದಾರೆ ಎಂದು ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ. ಸ್ವಾಮೀಜಿ ಕಣ್ತೆರೆದು ನೋಡಿ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ಸೋಮವಾರ ಬೆಳಗ್ಗೆ ರಕ್ತಪರೀಕ್ಷೆ ವರದಿಯಲ್ಲಿ ಶ್ವಾಸ ಕೋಶದಲ್ಲಿನ ಸೋಂಕು ಕಡಿಮೆಯಾಗಿರು ವುದು ಮತ್ತು ದೇಹದಲ್ಲಿ ಪ್ರೊಟೀನ್ ಅಂಶ ಜಾಸ್ತಿ ಆಗಿರುವುದು ಸ್ಪಷ್ಟವಾಗಿದೆ. ಪ್ರೊಟೀನ್ ಅಂಶ ಪ್ರತಿ ಲೀಟರ್‌ಗೆ 3.4 ಮಿಲಿ ಗ್ರಾಂಗೆ ಏರಿಕೆಯಾಗಿದೆ. 

ಈ ನಡುವೆ ಶ್ರೀಗಳಿಗೆ ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿ ಎಂದು ಡಾ.ಪರಮೇಶ್ ಹೇಳಿದ್ದಾರೆ. 

click me!