
ಉಳ್ಳಾಲ: ಶಬರಿಮಲೆ ಯಾತ್ರೆ ಕೈಗೊಳ್ಳಲಿದ್ದ ಗುರುಸ್ವಾಮಿಯೊಬ್ಬರು ಇರುಮುಡಿ ಕಟ್ಟುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಇರಾ ಮೂಳೂರಿನಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಮೂಳೂರು ನಿವಾಸಿ ಸುರೇಶ್ ಗುರುಸ್ವಾಮಿ (56) ಮೃತಪಟ್ಟವರು. ಈ ಸಲ ಸುರೇಶ್ ಗುರುಸ್ವಾಮಿ ಅವರು 17ನೇ ಬಾರಿ ಶಬರಿಮಲೆ ಯಾತ್ರೆಗೆ ಹೋಗುವವರಿದ್ದರು. ಆ ಪ್ರಯುಕ್ತ ಸೋಮವಾರ ತಮ್ಮ ಊರಿನ 22 ಮಂದಿ ವ್ರತಧಾರಿಗಳ ಜೊತೆಗೆ ತೆರಳುವವರಿದ್ದರು.
ಶಬರಿಮಲೆ ದೇಗುಲದ ಅಶ್ವತ್ಥ ಮರಕ್ಕೆ ಬೆಂಕಿ!
ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಸಹಸ್ರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅನ್ನದಾನ ಆಯೋಜಿಸಲಾಗಿತ್ತು. ಆದರೆ ಸುರೇಶ್ ಗುರುಸ್ವಾಮಿ ಇರುಮುಡಿ ಕಟ್ಟುವ ಸಂದರ್ಭದಲ್ಲೇ ಹೃದಯಘಾತಕ್ಕೆ ಒಳಗಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಶಬರಿಗೆಮಲೆಗೆ ಮೂರಲ್ಲ 10 ಮಹಿಳೆಯರ ಪ್ರವೇಶ!
ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಸದಾ ಅಯ್ಯಪ್ಪನ ಧ್ಯಾನದಲ್ಲೇ ಇರುತ್ತಿದ್ದ ಅವರು ಇತ್ತೀಚೆಗೆ, ಸಂಪ್ರದಾಯ ಮುರಿದು ಮಹಿಳೆಯರು ಪ್ರವೇಶಿಸಿರುವ ವಿಚಾರವಾಗಿ ಸ್ನೇಹಿತರಲ್ಲಿ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.