
ನವದೆಹಲಿ (ಮಾ.23): ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರನ್ನು ಆಯ್ಕೆ ಮಾಡಿದ ಬಿಜೆಪಿ ಕ್ರಮವನ್ನು ಟ್ವೀಟರ್’ನಲ್ಲಿ ಟೀಕಿಸಿರುವ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ ಶಿರೀಶ್ ಕುಂದರ್, ಆದಿತ್ಯನಾಥರನ್ನು ಗೂಂಡಾ ಎಂದು ಬಣ್ಣಿಸಿದ್ದಾರೆ. ಬಳಿಕ ಆ ಟ್ವೀಟ್’ಗಳನ್ನು ಅಳಿಸಿಹಾಕಿದ್ದಾರೆ.
ಗೂಂಡಾನೊಬ್ಬನಿಗೆ ಆಡಳಿತ ಕೊಟ್ಟುಬಿಟ್ಟರೆ ಆತ ಗಲಭೆಗಳನ್ನು ಸೃಷ್ಟಿಸುವುದನ್ನು ಬಿಟ್ಟುಬಿಡುತ್ತಾನೆಯೆಂದು ನಿರೀಕ್ಷಿಸುವುದು, ಅತ್ಯಾಚಾರ ಮಾಡಲು ಅತ್ಯಾಚಾರಿಗೆ ಅನುವುಮಾಡಿಕೊಟ್ಟರೆ ಆತ ಆತ್ಯಾಚಾರ ಮಾಡಲ್ಲವೆಂಬಂತಿದೆ, ಎಂದು ಕುಂದರ್ ಟ್ವೀಟಿಸಿದ್ದರು.
ಆ ತರ್ಕದಂತೆ ಮುಂದುವರಿದು ಗೂಂಡಾನನ್ನು ಮುಖ್ಯಮಂತ್ರಿಯಾಗಿ ಮಾಡಿದರೆ,ದಾವೂದ್ ಇಬ್ರಾಹಿಂ’ನನ್ನು ಸಿಬಿಐ’ನ ಮುಖ್ಯಸ್ಥನಾಗಬಹುದು ಅಥವಾ ಮಲ್ಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಬಹುದು, ಎಂದು ಕುಂದರ್ ವ್ಯಂಗ್ಯವಾಡಿದ್ದರು. ಎಂದು ಏಎನ್ಐ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.