ರಮ್ಯಾ ಮೇಡಂ'ಗೆ ಕ್ಲಾಸ್ ತಗೊಂಡ ಶಿಲ್ಪಾ ಗಣೇಶ್ : ಏಕೆ ಗೊತ್ತೆ

By Suvarna Web DeskFirst Published May 23, 2017, 6:06 PM IST
Highlights

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ನಟ ಗಣೇಶ್ ಅವರ ಪತ್ನಿಯು ಆಗಿರುವ ಶಿಲ್ಪಾ ಗಣೇಶ್ ಕೆಂಡವಾಗಿ ತಮ್ಮ ಫೇಸ್'ಬುಕ್ ಪುಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪರಿಯಿದು.

ಬೆಂಗಳೂರು(ಮೇ.23): ಬಿಜೆಪಿ ಸರ್ಕಾರ ಹಾಗೂ ನರೇಂದ್ರ ಮೋದಿ ಆಡಳಿತದ ವಿರುದ್ಧ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಮುಖಂಡೆ ರಮ್ಯಾ ದೆಹಲಿಯಲ್ಲಿ ಮಾತನಾಡಿದ್ದು ಇತ್ತೀಚಿಗಷ್ಟೆ ಸುದ್ದಿಯಾಗಿತ್ತು. ಅಲ್ಲದೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲಿನ ದೌರ್ಜನ್ಯಗಳು ಶೇ.22 ರಷ್ಟು ಹೆಚ್ಚಾಗಿವೆ ಎಂದು ಆರೋಪಿಸಿದ್ದರು.

ರಮ್ಯಾ ಮೇಡಂ ಮೋದಿ ಸರ್ಕಾರ ಮಹಿಳೆಯರ ಸುರಕ್ಷಣೆಯನ್ನು ನಿರ್ಲಕ್ಷಿಸಿದೆ ಎಂದು ಟೀಕಿಸಿದ್ದಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ನಟ ಗಣೇಶ್ ಅವರ ಪತ್ನಿಯು ಆಗಿರುವ ಶಿಲ್ಪಾ ಗಣೇಶ್ ಕೆಂಡವಾಗಿ ತಮ್ಮ ಫೇಸ್'ಬುಕ್ ಪುಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪರಿಯಿದು.

'ರಮ್ಯಾ ಮೇಡಂ ಅವರೇ, ಸೋನಿಯಾ ಹಾಗೂ ರಾಹುಲ್ ನಾಯಕತ್ವದಲ್ಲಿ ಅತ್ಯದ್ಭುತ ಸೇವೆಯನ್ನು ಮಾಡುತ್ತಿದ್ದೀರಿ, ಆದರೆ ನೀವು ದಯವಿಟ್ಟು ರಾಹುಲ್ ಗಾಂಧಿ ರೀತಿ ಮಾತನಾಡಬೇಡಿ. ನೀವು ಹೇಳುತ್ತೀರಿ  ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಕಾಂಗ್ರೆಸ್ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲವೆಂದು, ನಿರ್ಭಯ ಅತ್ಯಾಚಾರ ಪ್ರಕರಣವನ್ನು ನಿರ್ಲಕ್ಷಿಸಿದ ಕಾರಣದಿಂದಲೇ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಪರಾಭವಗೊಂಡಿತು ಎಂಬುದನ್ನು ನಿಮಗೆ ನೆನಪಿಸುತ್ತೇನೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ಬೆಂಬಲಿಗರು ಸಾರ್ವಜನಿಕ ಸ್ಥಳದಲ್ಲಿಯೇ ಜೆಡಿಎಸ್'ನ ಮಹಿಳಾ ಕಾರ್ಪೋರೇಟರ್ ಅವರ ಸೀರೆ ಎಳೆದಾಗ ನೀವು ಎಲ್ಲಿ ಹೋಗಿದ್ದಿರಿ ಮೇಡಂ ?

ಈ ಘಟನೆ ನಡೆದಾಗ ಕರ್ನಾಟಕ ಮುಖ್ಯಮಂತ್ರಿ ಅವರ ಕಾರ್ಯಕ್ರಮ ನಡೆಯುತ್ತಿತ್ತು ಎಂಬುದು ನಿಮಗೆ ಗೊತ್ತಿರಬೇಕು ಆ ಮಹಿಳೆ ದೂರು ನೀಡಿದ ನಂತರ ಮುನುರತ್ನ ಅವರನ್ನು ಬೆದರಿಸುತ್ತಿರುವುದು ನಿಜವೆ ? ನಿಮಗೆ ಗೊತ್ತೆ ಮುನಿರತ್ನ ಅವರ ಬೆಂಬಲಿಗರು ಈ ಹಿಂದೆ ನಿಮ್ಮದೆ ಪಕ್ಷದ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಮೇಲೆ ದಾಳಿ ನಡೆಸಿದ್ದು, ಈ ಬಗ್ಗೆ ದೂರು ಕೂಡ ದಾಖಲಾಗಿದೆ.

ಸೆಕ್ಸ್ ಪ್ರಕರಣದಲ್ಲಿ ಭಾಗಿಯಾದ ನಿಮ್ಮ ಪಕ್ಷದ ಮಾಜಿ ಮಂತ್ರಿ ಮೇಟಿ ವಿರುದ್ಧ ನಿಮ್ಮ ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಮೊದಲು ನಿಮ್ಮ ಪಕ್ಷ  ಮಹಿಳೆಯರಿಗೆ ಸುರಕ್ಷಣೆ ನೀಡಿ ನಂತರ ಇತರರ ಬಗ್ಗೆ  ಮಾತನಾಡಿ.  ನಿಮ್ಮ ಸರ್ಕಾರದಲ್ಲಿದ್ದ ಕೇಂದ್ರ ಸಚಿವರ ಪತ್ನಿಗೆ(ಸುನಂದ ಪುಷ್ಕರ್) ನೀವು ರಕ್ಷಣೆ ಕೊಡಲಾಗಲಿಲ್ಲ. ನೀವು ಹೇಳುತ್ತೀರಿ ಬಿಜೆಪಿ ರೈತರಿಗೆ ಹಣ ಬಿಡುಗಡೆ ಮಾಡಲಿಲ್ಲವೆಂದು ನಿಮಗೆ ಗೊತ್ತೆ ಕರ್ನಾಟಕ ಸರ್ಕಾರ 2016-17 ರಿಂದ ಕೇಂದ್ರದಿಂದ 28,750 ಸಾವಿರ ಕೋಟಿ ಸ್ವೀಕರಿಸಿದೆ ಎಂದು ಕೇಂದ್ರ ಹಣಕಾಸು ಇಲಾಖೆಯ ಅಧಿಕೃತ ಪತ್ರಗಳೆ ಹೇಳುತ್ತವೆ. ಹಾಗಾದರೆ ಹಣ ಎಲ್ಲಿ ಹೋಯಿತು ಮೇಡಂ ?

ಮೇಡಂ, ನೀವು ಅತ್ಯುತ್ತಮವಾಗಿ ಇಂಗ್ಲೀಷ್ ಮಾತನಾಡುತ್ತೀರಿ. ಆದರೆ ಕರ್ನಾಟಕದ ಜನರಿಗೆ ನಿಮ್ಮ ನಕಲಿ ಅಮೆರಿಕಾ ಶೈಲಿಯ ಇಂಗ್ಲಿಷ್ ಅರ್ಥವಾಗುವುದಿಲ್ಲ!!!

ಮೂಲ: ದಿ ಟೈಮ್ಸ್ ಆಫ್ ಇಂಡಿಯಾ

click me!