ಸ್ಮೃತಿ ಇರಾನಿ ಶೈಕ್ಷಣಿಕ ದಾಖಲೆ ನೀಡುವಂತೆ ದೆಹಲಿ ಹೈಕೋರ್ಟ್ ಸೂಚನೆ

By Suvarna Web DeskFirst Published May 23, 2017, 5:28 PM IST
Highlights

ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಶೈಕ್ಷಣಿಕ ಅರ್ಹತೆ ವಿಚಾರ ಇನ್ನೂ ಮುಗಿದಿಲ್ಲ. ಅವರ ಶೈಕ್ಷಣಿಕ ದಾಖಲೆಗಳನ್ನು ಕೋರ್ಟ್’ಗೆ ಸಲ್ಲಿಸಬೇಕೆಂದು ದೆಹಲಿ ಹೈಕೋರ್ಟ್ ಇಂದು ಕೇಳಿದೆ.

ನವದೆಹಲಿ (ಮೇ.23): ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಶೈಕ್ಷಣಿಕ ಅರ್ಹತೆ ವಿಚಾರ ಇನ್ನೂ ಮುಗಿದಿಲ್ಲ. ಅವರ ಶೈಕ್ಷಣಿಕ ದಾಖಲೆಗಳನ್ನು ಕೋರ್ಟ್’ಗೆ ಸಲ್ಲಿಸಬೇಕೆಂದು ದೆಹಲಿ ಹೈಕೋರ್ಟ್ ಇಂದು ಕೇಳಿದೆ.

ಸ್ಮೃತಿ ಇರಾನಿಯವರು ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿದ್ದಾರೆಂದು ಆರೋಪಿಸಿ ಅಹ್ಮದ್ ಖಾನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೆಳ ನ್ಯಾಯಾಲಯ ಅನಗತ್ಯವಾಗಿ ಸ್ಮೃತಿ ಇರಾನಿಯವರನ್ನು ಎಳೆದು ತರಲಾಗುತ್ತಿದೆ ಎಂದು ಮೊಕದ್ದಮೆಯನ್ನು ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಅಹ್ಮದ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದರು.

2004 ರಿಂದ 2104 ರ ನಡುವಿನ ಚುನಾವಣೆಗಳಲ್ಲಿ ಸ್ಮೃತಿ ಇರಾನಿ ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿದ್ದರು ಎಂದು ಅಹ್ಮದ್ ಖಾನ್ ಆರೋಪಿಸಿದ್ದರು. ಈ ಸಂದರ್ಭದಲ್ಲಿ ಇರಾನಿಯವರು ಶಿಕ್ಷಣ ಸಚಿವೆಯಾಗಿದ್ದರು.

ಸ್ಮೃತಿ ಇರಾನಿ ಬೇಕಂತಲೇ ಸರಿಯಾದ ದಾಖಲೆಗಳನ್ನು ಒದಗಿಸುತ್ತಿಲ್ಲ. ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಎಂದು  ಅಹ್ಮದ್ ಖಾನ್ ಆರೋಪಿಸಿದ್ದಾರೆ.

click me!