ಗೋ ಹತ್ಯೆ ವಿರುದ್ಧ ಶಿಯಾ ಮಂಡಳಿ ಫತ್ವಾ

By Suvarna Web DeskFirst Published Apr 5, 2017, 2:20 PM IST
Highlights

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿರುವ ಗೋ ವಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಿಸುತ್ತಿದ್ದು ಇನ್ನೊಂದು ಕಡೆ ಗೋವಧೆಯನ್ನು, ಗೋಮಾಂಸ ಸೇವನೆ ವಿರುದ್ಧ  ಶಿಯಾ ಮಂಡಳಿ ಫತ್ವಾ ಹೊರಡಿಸಿದೆ.

ಲಕ್ನೋ (ಏ.05): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿರುವ ಗೋ ವಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಿಸುತ್ತಿದ್ದು ಇನ್ನೊಂದು ಕಡೆ ಗೋವಧೆಯನ್ನು, ಗೋಮಾಂಸ ಸೇವನೆ ವಿರುದ್ಧ  ಶಿಯಾ ಮಂಡಳಿ ಫತ್ವಾ ಹೊರಡಿಸಿದೆ.

ಇರಾಕ್ ನಲ್ಲಿರುವ ಶಿಯಾ ಮಂಡಳಿ ಜೊತೆ ಮಾತುಕತೆ ನಡೆಸಿದ ಬಳಿಕ ಗೋವಧೆ, ಗೋಮಾಂಸ ಸೇವನೆ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಶಿಯಾ ಮಂಡಳಿ ಸದಸ್ಯ ಮೌಲಾನಾ ಯಾಸೂಬ್ ಅಬ್ಬಾಸ್ ಲಕ್ನೋದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಹೇಳಿದ್ದಾರೆ.

ನಾವು ಇರಾಕ್ ನಲ್ಲಿರುವ ಶಿಯಾ ಮಂಡಳಿಯ ಆಯಾತೊಲ್ಲಹ್ ಶೇಖ್ ಬಶೀರ್ ನಜಾಫಿಯವರಿಗೆ ಗೋಹತ್ಯೆ ವಿಚಾರವಾಗಿ ಪತ್ರ ಬರೆದಿದ್ದೇವೆ. ಅದಕ್ಕೆ ಅವರು ಪ್ರತಿಕ್ರಿಯಿಸಿದ್ದು ಗೋ ಹತ್ಯೆ ವಿರುದ್ಧ ಫತ್ವಾ ಹೊರಡಿಸಲು ಹೇಳಿದ್ದಾರೆ ಎಂದು ಅಬ್ಬಾಸ್ ಹೇಳಿದ್ದಾರೆ.

ಗೋಹಂತಕರಿಂದ ದೇಶದಲ್ಲಿ ಆಗಾಗ ಕೋಮು ಗಲಭೆ ಉಂಟಾಗುವುದರಿಂದ ಈ ಫತ್ವಾ ಹೊರಡಿಸಲಾಗಿದೆ.   

click me!