‘ಕಾಶ್ಮೀರಿಗಳಿಗೆ ಸೇನೆ ಚಿತ್ರ ಹಿಂಸೆ’: ಶೆಹ್ಲಾ ವಿರುದ್ಧ ರಾಷ್ಟ್ರದ್ರೋಹ ಕೇಸ್| ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ನಾಯಕಿ ಶೆಹ್ಲಾ ರಶೀದ್
ನವದೆಹಲಿ[ಸೆ.07]: ಕಾಶ್ಮೀರ ವಿಚಾರ ಸಂಬಂಧ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕಿ ಹಾಗೂ ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ನಾಯಕಿ ಶೆಹ್ಲಾ ರಶೀದ್ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಕಾಶ್ಮೀರದಲ್ಲಿ ಸೇನಾ ದೌರ್ಜನ್ಯ ನಡೆಯುತ್ತಿರುವುದಕ್ಕೆ ಸಾಕ್ಷಿ ನೀಡಲು ಸಿದ್ಧ: ಶೆಹ್ಲಾ
undefined
ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಸೇನಾ ಪಡೆಗಳು ನಾಗರಿಕರಿಗೆ ಕಿರುಕುಳ ಕೊಡುತ್ತಿವೆ. ರಾತ್ರಿ ಮನೆಗಳಿಗೆಗೆ ನುಗ್ಗಿ ದರೋಡೆ ಮಾಡುತ್ತಿದೆ ಎಂದು ಆ.17 ರಂದು ಸರಣಿ ಟ್ವೀಟ್ ಮೂಲಕ ಶೆಹ್ಲಾ ರಶೀದ್ ಆರೋಪಿಸಿದ್ದರು. ಅಲ್ಲದೇ ನಾಲ್ವರನ್ನು ಶೋಪಿಯಾನ್ ಸೇನಾ ಶಿಬಿರಕ್ಕೆ ಕರೆಸಿ ಚಿತ್ರ ಹಿಂಸೆ ನೀಡಲಾಗಿದ್ದು, ಅವರ ಬಳಿ ಮೈಕ್ ಇಟ್ಟು ಕಿರುಚಾಡುವ ಶಬ್ದವನ್ನು ಜನರಿಗೆ ಕೇಳುವಂತೆ ಮಾಡಿ ಬೆದರಿಸಲಾಗಿದೆ ಎಂದು ಆರೋಪಿಸಿದ್ದರು. ಶೆಹ್ಲಾ ಆರೋಪದ ವಿರುದ್ದ ಸುಪ್ರಿಂ ಕೋರ್ಟ್ ವಕೀಲ ಶ್ರೀವಾಸ್ತವ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್‌ಗೆ ದೂರು ನೀಡಿದ್ದರು.
ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸ್ಬೇಡಿ: ಶೆಹ್ಲಾಗೆ ಕಾಂಗ್ರೆಸ್ ನಾಯಕನ ಮನವಿ!
ಅಲ್ಲದೇ ಮೈಕ್ ಇಟ್ಟು ಹಿಂಸೆ ನೀಡಲಾಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ದೇಶದಲ್ಲಿ ಹಿಂಸೆಗೆ ಪ್ರಚೋದನೆ ನೀಡಲು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಹರಡಲಾಗುತ್ತಿದೆ. ಭಾರತ ಸರ್ಕಾರದ ವಿರುದ್ದ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದರಿಂದ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಕೋರಿದ್ದರು. ಶ್ರೀವಾತ್ಸವ ಅವರ ದೂರನ್ನು ಸ್ವೀಕಾರ ಮಾಡಲಾಗಿದ್ದು, ಶೆಹ್ಲಾ ರಶೀದ್ ಮೇಲೆ ದೇಶದ್ರೋಹ, ದ್ವೇಷ ಬಿತ್ತನೆ, ಗಲಭೆಗೆ ಪ್ರಚೋದನೆ ಮುಂತಾದ ಆರೋಪದಡಿ ದೂರು ದಾಖಲಾಗಿದೆ.
ಕಾಶ್ಮೀರ ನಾಗರಿಕರ ಮೇಲೆ ದೌರ್ಜನ್ಯವಾಗಿಲ್ಲ, ಶೆಹ್ಲಾ ಹೇಳಿದ್ದೆಲ್ಲಾ ಸುಳ್ಳು: ಭಾರತೀಯ ಸೇನೆ