
ದೇಶದಲ್ಲಿ ಥಳಿಸಿ ಹತ್ಯೆಗೈಯುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಬಿಜೆಪಿ ನಾಯಕ ಶತ್ರುಘ್ನಾ ಸಿನ್ಹಾ ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿ ಥಳಿಸಿ ಹತ್ಯೆಗೈಯುವ ಘಟನೆಗಳು ಖಂಡನಾರ್ಹ, ದೇಶಾದ್ಯಂತ ಈ ಹೊಸ ಚಾಳಿ ಹರಡುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕದಿದ್ದರೆ ಭಾರೀ ಸಮಸ್ಯೆಯಾಗಲಿದೆ. ಮುಂದೆ ಯಾರು ಏನನ್ನು ತಿನ್ನಬೇಕು ಏನನ್ನು ತೊಡಬೇಕೆಂಬುವುದನ್ನು ದುಷ್ಕರ್ಮಿಗಳ ಗುಂಪೇ ನಿರ್ಧರಿಸಬಹುದು ಎಂದು ಸಿನ್ಹಾ ಹೇಳಿದ್ದಾರೆ.
ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದೇ, ಥಳಿಸಿ ಹತ್ಯೆಗೈಯುವ ಚಾಳಿಗೆ ವ್ಯಕ್ತವಾಗಿರುವ ಖಂಡನೆ ಬಹಳ ಕಡಿಮೆ ಹಾಗೂ ತುಂಬಾ ವಿಳಂಬವಾಗಿದೆ, ಇನ್ನೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆಯೆಂದು ಸಿನ್ಹಾ ಹೇಳಿದ್ದಾರೆ.
ನಾನು ಹಿಂದೂವಾಗಿರುವುದಕ್ಕೆ ಹೆಮೆಯಿದೆ. ಆದರೆ ಇಂತಹ ಘಟನೆಗಳಿಂದ ನೊಂದಿದ್ದೇನೆ ಎಂದಿರುವ ಸಿನ್ಹಾ, ನಾವೆಲ್ಲರೂ ಮೊದಲು ಭಾರತೀಯರು, ಬಳಿಕ ಹಿಂದೂ ಹಾಗೂ ಮುಸ್ಲಿಮರಾಗಿದ್ದೇವೆ ಎಂದು ಹೇಳಿದ್ದಾರೆ.
ಈದ್ ಸಂದರ್ಭದಲ್ಲೇ ಭಾರತೀಯನೇ ಆಗಿರುವ ಅಮಾಯಕ ಬಾಲಕ ಜುನೈದ್’ನನ್ನು ಥಳಿಸಿ ಹತ್ಯೆಗೈಯ್ಯಲಾಗಿದೆ. ಆತ ಮಾಡಿದ ತಪ್ಪಾದರೂ ಏನು? ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.