ಕ್ರೆಕೆಟಿಗನ ಬಗ್ಗೆ ಹೆಂಡತಿಯಿಂದ ರಾಸಲೀಲೆಯ ಸ್ಫೋಟಕ ಸತ್ಯ ಬಹಿರಂಗ

Published : Jul 13, 2018, 09:37 AM ISTUpdated : Jul 13, 2018, 12:22 PM IST
ಕ್ರೆಕೆಟಿಗನ ಬಗ್ಗೆ ಹೆಂಡತಿಯಿಂದ ರಾಸಲೀಲೆಯ ಸ್ಫೋಟಕ ಸತ್ಯ ಬಹಿರಂಗ

ಸಾರಾಂಶ

ಈ ಕ್ರಿಕೆಟಿಗನ ಬಗ್ಗೆ ಸ್ವತಃ ಪತ್ನಿಯೇ ಸ್ಫೋಟಕ ಸತ್ಯವನ್ನು ತಮ್ಮ ಪುಸ್ತಕದಲ್ಲಿ ಬಹಿರಂಗ ಮಾಡಿದ್ದಾರೆ. ಅಕ್ರಮ ಸಂಬಂಧ ಹಾಗೂ ವಿವಿಧ ವಿಚಾರಗಳ ಬಗ್ಗೆ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. 

ಇಸ್ಲಾಮಾಬಾದ್‌ :  ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಅಧ್ಯಕ್ಷ ಇಮ್ರಾನ್‌ ಖಾನ್‌ ಅವರು ನಡೆಸಿದ್ದರು ಎನ್ನಲಾದ ರಾಸಲೀಲೆಗಳು, ಅವರದ್ದು ಎನ್ನಲಾದ 5 ಅಕ್ರಮ ಸಂತಾನಗಳು, ಸಲಿಂಗಕಾಮತನ, ಭ್ರಷ್ಟಾಚಾರ- ಮೊದಲಾದ ವಿಷಯಗಳನ್ನು ಖಾನ್‌ ಅವರ ಮಾಜಿ ಪತ್ನಿ ರೇಹಂ ಖಾನ್‌ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

‘ರೇಹಂ ಖಾನ್‌’ ಹೆಸರಿನ ಈ ಪುಸ್ತಕ ಗುರುವಾರ ಬಿಡುಗಡೆಯಾಗಿದ್ದು, ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ರೇಹಂ ಅವರು ಇಮ್ರಾನ್‌ ಜತೆ 10 ತಿಂಗಳು ವೈವಾಹಿಕ ಸಂಬಂಧದಲ್ಲಿದ್ದು, ವಿಚ್ಛೇದನ ಪಡೆದಿದ್ದರು.

ಅಕ್ರಮ ಮಕ್ಕಳು:  ಪುಸ್ತಕದಲ್ಲಿ ಹಲವು ಸ್ಫೋಟಕ ಸಂಗತಿಗಳಿವೆ. ‘ಇಮ್ರಾನ್‌ ತನಗೆ 5 ಮಕ್ಕಳಿದ್ದಾರೆ. ಅವರೆಲ್ಲ ಅಕ್ರಮ ಸಂತಾನಗಳು ಎಂದು ನನಗೆ ತಿಳಿಸಿದ್ದರು. ಭಾರತೀಯ ವಿವಾಹಿತ ಮಹಿಳೆಯರಿಗೂ ತಾನು ಸಂತಾನಭಾಗ್ಯ ಕರುಣಿಸಿರುವೆ. ಕೆಲವು ಮಕ್ಕಳಿಲ್ಲದ ಮಹಿಳೆಯರ ಜತೆ ಸಂಬಂಧ ಇರಿಸಿಕೊಂಡು ಅವರಿಗೆ ಮಗು ದಯಪಾಲಿಸಿರುವೆ. ಆದರೆ ಅವ್ಯಾವ ಸಂಬಂಧವೂ ಬಹಿರಂಗವಾಗಿಲ್ಲ ಎಂದು ನನ್ನ ಎದುರು ಇಮ್ರಾನ್‌ ಹೇಳಿದರು’ ಎಂದು ಪುಸ್ತಕದಲ್ಲಿ ರೇಹಂ ಬರೆದಿದ್ದಾರೆ. ಇಮ್ರಾನ್‌ರ ಇಂಥ ಅಕ್ರಮ ಮಕ್ಕಳಲ್ಲಿ ಓರ್ವನಿಗೆ ಈಗ 34 ವರ್ಷವಂತೆ.


ಪುಸ್ತಕದಲ್ಲಿನ ಕುತೂಹಲದ ಅಂಶಗಳು

- ಇಮ್ರಾನ್‌ ಖಾನ್‌ಗೆ 5 ಅಕ್ರಮ ಸಂತಾನಗಳು

- ಮಕ್ಕಳಿಲ್ಲದ ಭಾರತೀಯ ಮಹಿಳೆಯರಿಗೂ ಇಮ್ರಾನ್‌ ಖಾನ್‌ರಿಂದ ಸಂತಾನ ಭಾಗ್ಯ

- ಇಮ್ರಾನ್‌ ಮನೆಗೆ ದೊಡ್ಡ ರಾಜಕಾರಣಿಗಳು ಪುಕ್ಕಟೆ ಊಟ ಕಳಿಸುತ್ತಿದ್ದರು

- ಅನೇಕ ಮಾಫಿಯಾ, ಭ್ರಷ್ಟಾಚಾರ ಕೃತ್ಯಗಳಲ್ಲಿ ಇಮ್ರಾನ್‌ ಭಾಗಿ

- ‘ಪಾಪ ವಿಮೋಚನೆ’ಗಾಗಿ ನನ್ನ ಬೆತ್ತಲೆ ದೇಹದ ಮೇಲೆ ಕಪ್ಪು ಬೀಜ ಸವರಿದ್ದರು

- ಇಮ್ರಾನ್‌ ಮಾದಕ ವ್ಯಸನಿ. ಕೋಕ್‌ ಸೇವಿಸುವಾಗ ಬಾತ್‌ರೂಮಲ್ಲಿ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದೆ. ಹೆರಾಯಿನ್‌ ಕೂಡ ಸೇವಿಸುತ್ತಿದ್ದರು

- ಡ್ರಗ್ಸ್‌ ಸೇವನೆ ಗೊತ್ತಾಗಬಾರದೆಂದು ಮೌತ್‌ಗಾರ್ಡ್‌ ಹಾಕಿಕೊಳ್ಳುತ್ತಿದ್ದರು

- ಇಮ್ರಾನ್‌ ಸಲಿಂಗಕಾಮವನ್ನೂ ನಡೆಸಿದ್ದರು. ಮೋಬಿ ಎಂಬ ಸ್ನೇಹಿತನ ಜತೆ ಲೈಂಗಿಕ ಸಂಬಂಧ ಹೊಂದಿದ್ದರು

- ಪಕ್ಷದ ಅನೇಕ ಮಹಿಳೆಯರ ಜತೆ ಲೈಂಗಿಕ ಸಂಬಂಧ ಹೊಂದಿದ್ದರು, ಅಶ್ಲೀಲ ಚಾಟಿಂಗ್‌ ನಡೆಸುತ್ತಿದ್ದರು

- ಉಜ್ಮಾ ಖರ್ದಾರ್‌ ಎಂಬ ಇಮ್ರಾನ್‌ ಪಕ್ಷದ ನಾಯಕಿಯು ತನ್ನ ಯೋನಿಯ ದೃಶ್ಯಗಳನ್ನು ಇಮ್ರಾನ್‌ಗೆ ಕಳಿಸುತ್ತಿದ್ದಳು

- 80ರ ದಶಕದಲ್ಲಿ ಗ್ರೇಸ್‌ ಜೋನ್ಸ್‌ ಹಾಗೂ ಮಾಡೆಲ್‌ ಒಬ್ಬಳ ಜತೆ ‘ತ್ರಿಲೈಂಗಿಕ ಕ್ರಿಯೆ’ ನಡೆಸಿದ್ದಾಗಿ ಇಮ್ರಾನ್‌ ‘ಹೆಮ್ಮೆ’ ಪಡುತ್ತಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿ 24.55 ಲಕ್ಷ ಅನುಮಾನಾಸ್ಪದ ಫಲಾನುಭವಿಗಳು: ಕೃಷ್ಣ ಬೈರೇಗೌಡ
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ