ನದಿಗೆ ಉರುಳಿದ ಬಸ್: 9 ಸಾವು, 25 ಜನರಿಗೆಗೆ ಗಾಯ

Published : Nov 25, 2018, 09:20 PM ISTUpdated : Nov 25, 2018, 09:21 PM IST
ನದಿಗೆ ಉರುಳಿದ ಬಸ್: 9 ಸಾವು, 25 ಜನರಿಗೆಗೆ ಗಾಯ

ಸಾರಾಂಶ

ಖಾಸಗಿ ಬಸ್ ಸೇತುವೆಯಿಂದ ನದಿಗೆ ಬಿದ್ದು, ಕನಿಷ್ಠ 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿದ್ದಾರೆ.

ಶಿಮ್ಲಾ, [ನ.25]: ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಸೇತುವೆಯಿಂದ ನದಿಗೆ ಬಿದ್ದು, ಕನಿಷ್ಠ 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ  ಇಂದು [ಭಾನುವಾರ] ಸಂಜೆ ನಡೆದಿದೆ. 

ಈ ಘಟನೆಯು ರೆಣುಕಾ-ದದಹು-ನಹಾನು ರಸ್ತೆಯ ಖಾದ್ರಿ ಹಳ್ಳಿಯ ಸಮೀಪ ಸಂಭವಿಸಿದೆ.  ಬಸ್ಸು ನಹಾನ್ ನಿಂದ ರೇಣುಕಾ ಜೀಗೆ ತೆರಳುತ್ತಿತ್ತು. ಆ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಜಲಾಲ್ ಸೇತುವೆಯಿಂದ ಸುಮಾರು 40 ಅಡಿ ಆಳಕ್ಕೆ ಜಲಾಲ್ ನದಿಗೆ ಬಿದ್ದಿದೆ ಎಂದು ಹೆಚ್ಚುವರಿ ಎಸ್ ಪಿ ವೀರೆಂದರ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

ಮೂವರು ಮಹಿಳೆಯರನ್ನು ಒಳಗೊಂಡಂತೆ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಇನ್ನು ಕೆಲ ಗಾಯಾಳುಗಳನ್ನ ನಹಾನ್ ಹಾಗೂ ದದಹುನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.  ಚಾಲಕನ ನಿರ್ಲಕ್ಷ್ಯತೆಯೇ ಈ ಅಪಘಾತ ಕಾರಣ ಎಂದು ಶಂಕಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!