ದೀದಿಗೆ ಮೋದಿ ಏಟು, ಟಿಎಂಸಿ ತೊರೆದ ಇಬ್ಬರು ಶಾಸಕರು, 50 ಮುಖಂಡರು

By Web DeskFirst Published May 28, 2019, 5:11 PM IST
Highlights

ಲೋಕಸಭಾ ಚುನಾವಣೆಲ್ಲಿ ಬಿಜೆಪಿ ಮಮತಾ ಬ್ಯಾನರ್ಜಿ ಕೋಟೆಗೆ ನುಗ್ಗಿ ಸರಿಯಾದ ಹೊಡೆತವನ್ನೇ ನೀಡಿತ್ತು.  ಈಗ ಮತ್ತೆ ಅದರ ಮುಂದುವರಿದ ಭಾಗದಲ್ಲಿ ದೊಡ್ಡ ಮಟ್ಟದ ಆಪರೇಶನ್ ನಡೆದಿದೆ.

ಕೋಲ್ಕತ್ತಾ[ಮೇ,. 27] ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರಕ್ಕೆ ಸದ್ದಿಲ್ಲದೆ ಬಿಜೆಪಿ ಶಾಕ್ ನೀಡಿದೆ. ನರೇಂದ್ರ ಮೋದಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಡುವೆ ಲೋಕ ಚುನಾವಣೆಗೆಯೂದ್ದಕ್ಕೂ ವಾಕ್ಸಮರ ನಡೆದುಕೊಂಡೆ ಬಂದಿತ್ತು.

50 ಕ್ಕೂ ಅಧಿಕ ಕೌನ್ಸಿಲರ್ ಗಳು ಏಕಕಾಲದಲ್ಲಿ  ಟಿಎಂಸಿ ತೊರೆದು ಬಿಜೆಪಿ ಜಾಯಿನ್ ಆಗಿದ್ದಾರೆ.  ಜತೆಗೆ ಇಬ್ಬರು ಎಂಎಲ್ ಗಲೂ ಕಮಲದ ಕೈ ಹಿಡಿದಿದ್ದಾರೆ. ಸಿಎಪಿಐಎಂನ ಒಬ್ಬ ಎಂಎಲ್ ಎ ಸಹ ಬಿಜೆಪಿ ಜತೆ ಬಂದಿದ್ದಾರೆ.

ರಾಮ್ ದೇವ್ ಜರಿಯುವ ಭರದಲ್ಲಿ ಮೋದಿ ಎಳೆತಂದ ಓವೈಸಿ

ಬಿಜೆಪಿ ಸೇರಿದ ನಂತರ ಎಲ್ಲ ಮುಖಂಡರು ಜೖ ಶ್ರೀರಾಮ್ ಮತ್ತು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ ಇದೇ ಮೊದಲ ಸಾರಿ ಬಿಜೆಪಿ 18 ಸ್ಥಾನದಲ್ಲಿ ಜಯಗಳಿಸಿದೆ. ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲು ಸಿದ್ಧವಾಗಿದ್ದು ಪಕ್ಷಾಂತರ ಪರ್ವ ಆರಂಭವಾಗಿದೆ.

Two TMC MLAs and one CPM MLA from West Bengal join BJP at party headquarters in Delhi. More than 50 Councillors also join BJP pic.twitter.com/9cJ0gTn9FC

— ANI (@ANI)
click me!