
ಬೆಂಗಳೂರು (ಮೇ. 28): ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರು ಕಾಂಗ್ರೆಸ್ ನ ಕೃಷ್ಣ ಭೈರೇಗೌಡರನ್ನು 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಮಣಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಅವರ ಗೆಲುವನ್ನು ಅಭಿನಂದಿಸಲು ಬರುವವರಿಗೆ ಸದಾನಂದ ಗೌಡರು ಒಂದು ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಅಭಿನಂದಿಸಲು ಬರುವವರು ಹೂಗುಚ್ಛಗಳನ್ನು ಕೊಟ್ಟು ವಿಶ್ ಮಾಡೋದು ಸಹಜ. ಆ ಹೂಗುಚ್ಛ ಆಮೇಲೆ ಉಪಯೋಗಕ್ಕೆ ಬರುವುದುಲ್ಲ. ಆಮೇಲೆ ಹಾಗೆಯೇ ಕಸದಬಟ್ಟಿ ಸೇರುತ್ತದೆ. ಈ ನಿಟ್ಟಿನಲ್ಲಿ ಸದಾನಂದ ಗೌಡರು ಹೂಗುಚ್ಛ ತರುವವರಿಗೆ ಮನವಿ ಮಾಡಿದ್ದಾರೆ.
ನನ್ನನ್ನು ಅಭಿನಂದಿಸಲು ಬರುವ ನನ್ನ ಮತದಾರ ಬಂಧುಗಳಲ್ಲಿ ಕೋರಿಕೆ .ನೀವು ಬರುವಾಗ ದಯವಿಟ್ಟು ಹಾರ ,ಬೊಕ್ಕೆ ತರಬೇಡಿ .ಬಳಿಕ ಅದು ಅನುಪಯುಕ್ತ .ನೀವು ಮಾತ್ರಬಂದು ಹೃತ್ಪೂರ್ವಕ ವಾಗಿ ಅಭಿನಂದಿಸಿದರೆ ಸಾಕು ಅದೇ ನನಗೆ ಆಶೀರ್ವಾದ . ನಿಮಗೇನಾದರೂ ಕೊಡಲೇ ಬೇಕೆನಿಸಿದರೆ , ಗಿಡ ತನ್ನಿ . ಉತ್ತಮ ಪುಸ್ತಕ ತನ್ನಿ . ಬೇರೆಯವರೊಂದಿಗೆ ಹಂಚಿ ಕೊಳ್ಳಬಹುದು ಎಂದಿದ್ದಾರೆ.
ಸದಾನಂದ ಗೌಡರ ಈ ಮನವಿಯನ್ನು ತೇಜಸ್ವಿನಿ ಅನಂತ್ ಕುಮಾರ್ ಸ್ವಾಗತಿಸಿದ್ದು, ಗಿಡಗಳನ್ನು ನಮಗೆ ಕೊಡಿ. ನಾವು ಭಾನುವಾರ ನೆಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.