
ಒಮ್ಮೆ ಬಿಜೆಪಿ ಜೊತೆ ಹೋದ ತಪ್ಪಿಗೆ ಕಮ್ಯುನಿಸ್ಟರು ತನ್ನನ್ನು ನಂಬುವುದಿಲ್ಲ ಎಂದು ಗೊತ್ತಾದ ಮೇಲೆ ದೇವೇಗೌಡರು ಮಾಯೆಯ ಮೊರೆ ಹೋಗಿದ್ದಾರೆ. ಬಿಎಸ್‌ಪಿಗೆ ಮಂತ್ರಿ ಪದವಿ ಕೊಟ್ಟ ಗೌಡರು ಲೋಕಸಭಾ ಸೀಟು ಕೂಡ ಕೊಡುತ್ತೇವೆ ಎಂದಿದ್ದು ಸೋಜಿಗ.
ಹಾಗೇ ಸುಮ್ಮನೆ ಗೌಡರು ಯಾರಿಗೂ ಒಂದು ಗುಲಗಂಜಿ ಕೂಡ ಕೊಡೋರಲ್ಲ. ಬಹುಶಃ ಲೋಕಸಭಾ ಚುನಾವಣೆ ನಂತರ ದಿಲ್ಲಿಯಲ್ಲಿ ಒಂದು ಗಟ್ಟಿ ಮೈತ್ರಿ ಇದ್ದರೆ ಮತ್ತೊಮ್ಮೆ ಪ್ರಭಾವಿ ಆಗಬಹುದು ಎಂಬ ಯೋಚನೆಯಿಂದ ಗೌಡರು ಮಾಯಾವತಿ ಬಗ್ಗೆ ಮಮಕಾರ ತೋರಿಸುತ್ತಿದ್ದಾರೆ. ದೇವೇಗೌಡರ ಕೇರಂ ಆಟ ಅರ್ಥ ಆಗೋದು ಕಷ್ಟ. ಎಲ್ಲಿಂದ ಎಲ್ಲಿಗೆ ರಾಣಿಯನ್ನು ಬೀಳಿಸುತ್ತಾರೋ ಹೇಳಲಿಕ್ಕೆ ಆಗದು.
ದಶಕಗಳ ಹಿಂದೆ ಗೌಡರು ಪ್ರಧಾನಿ ಆಗಿದ್ದಾಗ ಪಶ್ಚಿಮ ಏಷ್ಯಾದ ರಾಯಭಾರಿ ಒಬ್ಬ, ‘ವಾಟ್ ಈಸ್ ಗೌಡಾಸ್ ಥಿಂಕಿಂಗ್’ ಎಂದು ಯಾವುದೋ ವಿಷಯದಲ್ಲಿ ಸಿಎಂ ಇಬ್ರಾಹಿಂ ಅವರಿಗೆ ಕೇಳಿದರಂತೆ. ತಕ್ಷಣ ಡಿಪ್ಲೊಮ್ಯಾಟ್‌ನನ್ನು ಹತ್ತಿರ ಕರೆದ ಇಬ್ರಾಹಿಂ ‘ರಾಗಿ ಮುದ್ದೆ ತಿನ್ನು’ ಎಂದರಂತೆ. ಪಾಪ ರಾಯಭಾರಿಗೆ ಮುದ್ದೆ ತಿನ್ನಲೂ ಆಗದು ನುಂಗಲೂ ಆಗದು. ಆತನ ಸ್ಥಿತಿ ನೋಡಿ ಇಬ್ರಾಹಿಂ, ‘ದಿಸ್ ಈಸ್ ಮಿಸ್ಟರ್ ಗೌಡ. ನೆವರ್ ಅಂಡರೆಸ್ಟಿಮೇಟ್’ ಎಂದು ಹೇಳಿದರಂತೆ.
[ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.