ಈ ಮುಸ್ಲಿಂ ಉದ್ಯಮಿ ಎಷ್ಟು ಮಂದಿರ ಕಟ್ತಾರಂತೆ ಗೊತ್ತಾ?

First Published Jul 3, 2018, 6:32 PM IST
Highlights

ಮುಸ್ಲಿಂ ಉದ್ಯಮಿಯಿಂದ 51 ದೇವಾಲಯ ನಿರ್ಮಾಣ

ಉತ್ತರಪ್ರದೇಶ, ಬಿಹಾರ ರಾಜ್ಯಗಳಲ್ಲಿ ಮಂದಿರ ನಿರ್ಮಾಣ

ಲಕ್ನೋ ಮೂಲದ ಉದ್ಯಮಿ ರಶೀದ್ ನಸೀಮ್

ಸಹೋದರತ್ವ ಸಂದೇಶ ಸಾರಲು ಮಂದಿರ ನಿರ್ಮಾಣ

ಪ್ರಧಾನಿ ನರೇಂದ್ರ ಮೋದಿ ಪ್ರೇರಣೆ
 

ಉತ್ತರಪ್ರದೇಶದ ಈ ಮುಸ್ಲಿಂ ಉದ್ಯಮಿ ಮಾಡಿದ ಕಾರ್ಯ ಕೇಳಿದರೆ ಭಕ್ತಿಗೆ, ನಂಬಿಕೆಗೆ ಧರ್ಮ ಎಂಬ ಗಡಿಗಳಿಲ್ಲ ಎಂಬುದು ಸಾಬೀತಾಗುತ್ತದೆ. ಅಲ್ಲದೇ ಇತರ ಧರ್ಮವನ್ನು ಗೌರವಿಸುವುದಷ್ಟೇ ಅಲ್ಲ ಅದನ್ನು ಬೆಂಬಲಿಸುವ ಗುಣವೂ ನಮ್ಮ ಮಣ್ಣಿನಲ್ಲಿದೆ ಎಂಬುದು ಗೊತ್ತಾಗುತ್ತದೆ.

ಲಕ್ನೋ ಮೂಲದ ಮುಸ್ಲಿಂ ಉದ್ಯಮಿ, ಶೈನ್ ಗ್ರೂಪ್ ಆಫ್ ಕಂಪನೀಸ್ ಮಾಲೀಕ ರಶೀದ್ ನಸೀಮ್ ಉತ್ತರಪ್ರದೇಶ ಮತ್ತು ಬಿಹಾರದ ವಿವಿಧೆಡೆ ಒಟ್ಟು 51 ದೇವಸ್ಥಾನ ಕಟ್ಟಲು ನೆರವಾಗಿದ್ದಾರೆ. ಉತ್ತರಪ್ರದೇಶ ಮತ್ತು ನೆರೆಯ ಬಿಹಾರ ರಾಜ್ಯಗಳಲ್ಲಿ 51 ದೇವಸ್ಥಾನಗಳನ್ನು ಕಟ್ಟಲು ರಶೀದ್ ಭೂಮಿಯನ್ನು ದಾನ ಮಾಡಿದ್ದಾರೆ. ಅಲ್ಲದೇ ಅಷ್ಟೂ ದೇವಾಲಯಗಳ ನಿರ್ಮಾಣ ವೆಚ್ಚವನ್ನು ತಾವೇ ಭರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಕಾರ್ಯಕ್ಕೆ ಪ್ರೇರಣೆ ಎಂದು ಹೇಳುವ ರಶೀದ್, ಸಮಾಜದಲ್ಲಿ ಕೋಮು ಸಾಮರಸ್ಯ ಮತ್ತು ಪರಸ್ಪರರ ನಂಬಿಕೆಗಳನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಲಿ ಎಂದು ಬಯಸಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.

click me!