ಮೋದಿ ದಿಲ್ಲಿಗೆ ಹೋದ ಮೇಲೆ... ಕಾಂಗ್ರೆಸ್'ಗೆ ಲಾಭವಾಯ್ತಂತೆ !

Published : Dec 01, 2017, 04:38 PM ISTUpdated : Apr 11, 2018, 12:51 PM IST
ಮೋದಿ ದಿಲ್ಲಿಗೆ ಹೋದ ಮೇಲೆ... ಕಾಂಗ್ರೆಸ್'ಗೆ ಲಾಭವಾಯ್ತಂತೆ !

ಸಾರಾಂಶ

ಹೀಗಾಗಿಯೇ ಏನೋ, ಗುಜರಾತ್'ನಲ್ಲಿ ಏಕಾಏಕಿ ಪಟೇಲ್ ಮೀಸಲಾತಿ ಹೋರಾಟ, ದಲಿತರ ಅಸ್ಮಿತೆ ವಿಷಯ ಜೊತೆಗೆ ಠಾಕೂರರ ಹೋರಾಟಗಳು ವೇಗ ಪಡೆದುಕೊಳ್ಳತೊಡಗಿದವು

2002ರ ಗುಜರಾತ್ ದಂಗೆಗಳ ನಂತರವಂತೂ ಕಾಂಗ್ರೆಸ್ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಮೋದಿಯ ಚರಿಷ್ಮಾ ಎದುರು ಕಾಂಗ್ರೆಸ್ ಎಷ್ಟೇ ತಿಪ್ಪರಲಾಗ ಹಾಕಿದರು ಕೂಡ 60ರ ಗಡಿ ದಾಟಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಒಂದು ಹಿಂದುತ್ವ ಮತ್ತೊಂದು ಕಣ್ಣಿಗೆ ಕಾಣುವ ಅಭಿವೃದ್ಧಿ. ಆದರೆ ಯಾವಾಗ 2014ರಲ್ಲಿ ಮೋದಿ ಪ್ರಧಾನಿಯಾಗಿ ದೆಹಲಿಗೆ ಹೋದರೋ ಕಾಂಗ್ರೆಸ್‌ಗೆ ಬೆಳ್ಳಿ ಗೆರೆಗಳು ಕಾಣಲಾರಂಭಿಸಿದವು.

ಹೀಗಾಗಿಯೇ ಏನೋ, ಗುಜರಾತ್'ನಲ್ಲಿ ಏಕಾಏಕಿ ಪಟೇಲ್ ಮೀಸಲಾತಿ ಹೋರಾಟ, ದಲಿತರ ಅಸ್ಮಿತೆ ವಿಷಯ ಜೊತೆಗೆ ಠಾಕೂರರ ಹೋರಾಟಗಳು ವೇಗ ಪಡೆದುಕೊಳ್ಳತೊಡಗಿದವು. ಕಾಂಗ್ರೆಸ್ ಎಷ್ಟೇ ನಿರಾಕರಿಸಬಹುದು, ಆದರೆ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರರ ಹೋರಾಟಗಳ ಹಿಂದೆ ಸ್ಥಳೀಯ ಕಾಂಗ್ರೆಸ್ ನಾಯಕರು ಇದ್ದರೆಂಬುದನ್ನು ಗುಜರಾತ್‌ನಲ್ಲಿ ಸಾಮಾನ್ಯ ಜನರೂ ಮಾತನಾಡಿಕೊಳ್ಳುತ್ತಾರೆ.

(ಪ್ರಶಾಂತ್ ನಾತು ಅವರ ಆಂಕಣದ ಆಯ್ದ ಭಾಗ - ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!
ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು