ಬದುಕಿರುವ ಮಗುವನ್ನು ಮೃತಪಟ್ಟಿದೆ ಎಂದ ವೈದ್ಯರು; ಪ್ರತಿಷ್ಠಿತ ಆಸ್ಪತ್ರೆಯಿಂದ ಮಹಾ ಎಡವಟ್ಟು

Published : Dec 01, 2017, 04:34 PM ISTUpdated : Apr 11, 2018, 12:58 PM IST
ಬದುಕಿರುವ ಮಗುವನ್ನು ಮೃತಪಟ್ಟಿದೆ ಎಂದ ವೈದ್ಯರು; ಪ್ರತಿಷ್ಠಿತ ಆಸ್ಪತ್ರೆಯಿಂದ ಮಹಾ ಎಡವಟ್ಟು

ಸಾರಾಂಶ

ದಿಲ್ಲಿಯ ಪ್ರತಿಷ್ಠಿತ ಶಾಲಿಮಾರ್​ ಭಾಗ್'​ನ ಮ್ಯಾಕ್ಸ್​ ಆಸ್ಪತ್ರೆ  ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಎಡವಟ್ಟು ನಡೆದಿದೆ.  ಅವಧಿ ಪೂರ್ಣವಾಗುವ ಮುನ್ನವೇ ಹುಟ್ಟಿದ ಅವಳಿ ಮಕ್ಕಳು ಜನಿಸುವಾಗಲೇ ಮೃತಪಟ್ಟಿವೆ ಎಂದು ವೈದ್ಯರು ಹೇಳಿದ್ದರು.  ಶವ ಅಂತ್ಯಸಂಸ್ಕಾರ ಮಾಡಲು ಪೋಷಕರು ತೆಗೆದುಕೊಂಡು ಹೋಗುವ ವೇಳೆ ಮಗು ಬದುಕಿರುವುದು ದೃಢವಾಗಿದೆ.

ನವದೆಹಲಿ (ಡಿ.01): ದಿಲ್ಲಿಯ ಪ್ರತಿಷ್ಠಿತ ಶಾಲಿಮಾರ್​ ಭಾಗ್'​ನ ಮ್ಯಾಕ್ಸ್​ ಆಸ್ಪತ್ರೆ  ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಎಡವಟ್ಟು ನಡೆದಿದೆ. ಅವಧಿ ಪೂರ್ಣವಾಗುವ ಮುನ್ನವೇ ಹುಟ್ಟಿದ ಅವಳಿ ಮಕ್ಕಳು ಜನಿಸುವಾಗಲೇ ಮೃತಪಟ್ಟಿವೆ ಎಂದು ವೈದ್ಯರು ಹೇಳಿದ್ದರು.  ಶವ ಅಂತ್ಯಸಂಸ್ಕಾರ ಮಾಡಲು ಪೋಷಕರು ತೆಗೆದುಕೊಂಡು ಹೋಗುವ ವೇಳೆ ಮಗು ಬದುಕಿರುವುದು ದೃಢವಾಗಿದೆ.

ನಮ್ಮ ಮಗು ಹುಟ್ಟುವ ಮೊದಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಅಂತ್ಯ ಸಂಸ್ಕಾರ ಮಾಡಲು ತೆಗೆದುಕೊಂಡು ಹೋಗುವಾಗ ಮಗುವಿನಲ್ಲಿ ಚಲನವಲನ ಕಂಡು ಬಂದಿದೆ. ವೈದ್ಯರು ಸುಳ್ಳು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೊಂದು ಅಚಾತುರ್ಯದ ಘಟನೆ. ಸಂಬಂಧಪಟ್ಟ ವೈದ್ಯರನ್ನು ತನಿಖೆ ನಡೆಸಲಾಗುವುದು ಎಂದು ಮ್ಯಾಕ್ಸ್ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

ವರ್ಷಾ ಎನ್ನುವ ಗರ್ಭಿಣಿ ಮಹಿಳೆ ಮಂಗಳವಾರ ಮಧ್ಯಾಹ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ನಂತರ ಅವರಿಗೆ ಹೆರಿಗೆಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೊದಲು ಗಂಡು ಮಗುವಾಗಿದ್ದು, 15 ನಿಮಿಷಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಡಿಸಿ ಟಾರ್ಗೆಟ್; ಎಂಇಎಸ್ ಪರ ನಿಂತು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ ಮಹಾರಾಷ್ಟ್ರದ ಸಂಸದ ಮಾನೆ!
ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!