
2002 ಮತ್ತು 2007ರಲ್ಲಿ ಮೋದಿಯ ವಿರುದ್ಧ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಮರ ಪರವಾಗಿದೆಯೇನೋ ಎಂಬ ಮಟ್ಟಕ್ಕೆ ಗುಜರಾತ್‌ನಲ್ಲಿ ವಾತಾವರಣ ನಿರ್ಮಾಣಗೊಂಡಿದ್ದು, ಇವತ್ತಿಗೂ ಕಾಂಗ್ರೆಸ್ ಬಗ್ಗೆ ಹಿಂದೂ ಮತದಾರರ ವಿಶ್ವಾಸದ ಕೊರತೆಗೆ ಕಾರಣವಾದಂತಿದೆ.
ಸೂರತ್‌ನಲ್ಲಿ ರಿಕ್ಷಾ ಓಡಿಸುವ ಪಾರಮಾರ ಅಂದರೆ ಕ್ಷತ್ರಿಯ ಜಾತಿಗೆ ಸೇರಿದ ಮಧ್ಯ ವಯಸ್ಕನೊಬ್ಬ ‘ಬಿಜೆಪಿ ಬಗ್ಗೆ ಬೇಸರವಿದೆ ಹೌದು. ಆದರೆ ಕಾಂಗ್ರೆಸ್ ಬಂದರೆ ಮುಸ್ಲಿಮರು 2002ರ ಬದಲಾ ತೆಗೆದುಕೊಂಡರೆ ಎಂಬ ಹೆದರಿಕೆಯಿದೆ’ ಎಂದು ಹೇಳುತ್ತಿದ್ದ.
ಇದಕ್ಕಾಗಿಯೇ ಏನೋ ಗುಜರಾತ್‌ಗೆ ಬಂದಾಗಲೆಲ್ಲ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ, ತಪ್ಪಿಯೂ ಮುಸ್ಲಿಂ ಮಸೀದಿಗೆ ಭೇಟಿ ನೀಡುತ್ತಿಲ್ಲ. ಹೇಗಿದ್ದರೂ 12 ಪ್ರತಿಶತ ಮುಸ್ಲಿಂ ಮತಗಳು ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಬಂದೇ ಬರುತ್ತವೆ ಎಂಬ ಯೋಚನೆಯೂ ಇರಬಹುದು. ಗುಜರಾತ್‌ನಲ್ಲಿ ಒಂದೇ ಪಕ್ಷದ ಸರ್ಕಾರದ ಏಕತಾನತೆ ಜಾತಿಯ ಹೋರಾಟಗಳು, ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ,
ಮೋದಿ ಗುಜರಾತ್‌ನಲ್ಲಿ ಇಲ್ಲದೆ ಇರುವುದು, ನೋಟ್ ಬ್ಯಾನ್, ಜಿಎಸ್‌ಟಿ ಹೀಗೆ ಬಿಜೆಪಿಗೆ ತೊಡಕಾಗಿರುವ ಹತ್ತಾರು ಕಾರಣಗಳಿವೆ. ಆದರೆ ಇವುಗಳನ್ನು ಕಾಂಗ್ರೆಸ್ ಮತಗಳನ್ನಾಗಿ ಪರಿವರ್ತಿಸಲು ಕಾಂಗ್ರೆಸ್ ಬಳಿ ಕ್ಷಮತೆ ಇದೆಯೇ? ಗುಜರಾತಿಗಳೇ ಉತ್ತರಿಸಬೇಕು.
(ಪ್ರಶಾಂತ್ ನಾತು ಅವರ ಆಂಕಣದ ಆಯ್ದ ಭಾಗ - ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.