
ಉತ್ತರದಲ್ಲಿ ಸೀಟು ಕಡಿಮೆ ಆದಾವು ಎಂಬ ಆತಂಕದಲ್ಲಿರುವ ಅಮಿತ್ ಶಾ ಪೂರ್ವದತ್ತ ದೃಷ್ಟಿ ಹರಿಸಿದ್ದು, ತಿಂಗಳಿಗೆ 4 ದಿನ ಪಶ್ಚಿಮ ಬಂಗಾಳಕ್ಕೆ ಹೋಗಲಿದ್ದಾರೆ. ಮಮತಾ ವಿರುದ್ಧ ಹೋರಾಟ ತೀವ್ರಗೊಳಿಸಿದರೆ ಕನಿಷ್ಠ 10 ಸೀಟ್ ಬಂದಾವು ಎಂಬ ಎಣಿಕೆಯಲ್ಲಿರುವ ಶಾ, ಒರಿಸ್ಸಾದಲ್ಲಿ ಮಾತ್ರ ನವೀನ್ ಪಟ್ನಾಯಕ್‌ರ ಬಿಜು ಜನತಾದಳ ಜತೆ ಮೈತ್ರಿಗೆ ಪ್ರಯತ್ನ ನಡೆಸಿದ್ದಾರೆ. ಅಂದ ಹಾಗೆ ಅವಿಶ್ವಾಸ ಗೊತ್ತುವಳಿ ಹಿಂದಿನ ರಾತ್ರಿ ಮೋದಿ ನವೀನ್ ಪಟ್ನಾಯಕ್ ರ ತಂಗಿ ಗೀತಾ ಮೆಹತಾರನ್ನು ಊಟಕ್ಕೆ ಮನೆಗೆ ಕರೆದಿದ್ದರಂತೆ.
ಸೋರುತಿಹುದು ಮಾಳಿಗೆ
ಮಿಂಟೋ ರೋಡ್‌ನಲ್ಲಿ ಬಿಜೆಪಿ ಹೊಸದಾಗಿ ಕಟ್ಟಿರುವ ಬಹು ಮಹಡಿ ಕಟ್ಟಡ ಮಾನ್ಸೂನ್‌ನ ಮೊದಲ ಮಳೆಗೇ ಸೋರಲು ಆರಂಭಿಸಿತ್ತು. ಮೆಟ್ಟಿಲುಗಳ ಮೇಲೆ ನೀರು ಹರಿದು ಬರಲು ಆರಂಭಿಸಿದಾಗ ಸಿಬ್ಬಂದಿ ನೀರು ಹೊರಗೆ ಹಾಕಲು ಹರಸಾಹಸ ಪಡಬೇಕಾಯಿತು. ಹೊಸ ಕಟ್ಟಡ ಉದ್ಘಾಟನೆಯಾಗಿ ಇನ್ನೂ ಒಂದು ವರ್ಷವೂ ಕಳೆದಿಲ್ಲ. ಮಾಳಿಗೆ ಸೋರಿದರೆ ಚಿಂತೆಯಿಲ್ಲ ಬಿಡಿ, ಲೋಕಸಭೆ ಎಲೆಕ್ಷನ್‌ನಲ್ಲಿ ಮತಗಳು ಸೋರಿ ಹೋಗಬಾರದಷ್ಟೆ.
(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.