
ಮಂಗಳೂರು[ಜು.24]: ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ‘ಮುಕಾಬಲಾ’ ಸಿನಿಮಾ ಹಾಡಿಗೆ ಕಲಾ ತಂಡವೊಂದು ಯಕ್ಷಗಾನ ವೇಷ ಧರಿಸಿ ನೃತ್ಯ ಪ್ರದರ್ಶನ ನೀಡಿದ್ದು ಇದೀಗ ಕರಾವಳಿಯ ಯಕ್ಷಗಾನ ಅಭಿಮಾನಿ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನದ ಆರಾಧನಾ ಪರಂಪರೆಯ ಹಿರಿಮೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕಲೆಗೆ ಅಪಚಾರ ಎಸಗಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲೂ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಯಕ್ಷಗಾನಕ್ಕೇ ಮೀಸಲಾಗಿರುವ ಅನೇಕ ವಾಟ್ಸಪ್ ಗ್ರೂಪ್’ಗಳಲ್ಲಿ ಅಭಿಮಾನಿಗಳು ಕೆಂಡ ಕಾರತೊಡಗಿದ್ದಾರೆ. ಕಳೆದೆರಡು ದಿನಗಳಿಂದ ಈ ಕುರಿತು ಭಾರಿ ಚರ್ಚೆಯೇ ಆರಂಭವಾಗಿದೆ.
ಅನೇಕರು ವಾಹಿನಿ ಕಚೇರಿಗೂ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಯಕ್ಷಗಾನ ಹಾಡು ಬಳಸಿ, ಯಕ್ಷಗಾನದ ಆಖ್ಯಾನಗಳನ್ನು ಬಳಸಿ ಅನ್ಯ ರಂಗದತ್ತ ಈ ಕಲೆಯನ್ನು ಕೊಂಡೊಯ್ಯುವುದು ಸರಿಯಲ್ಲ. ಇದರಿಂದ ವೀಕ್ಷಕರಿಗೆ ಯಕ್ಷಗಾನವನ್ನು ಹೇಗೂ ಬಳಕೆ ಮಾಡಬಹುದು ಎನ್ನುವ ತಪ್ಪು ಸಂದೇಶ ಹೋಗುತ್ತದೆ. ಮೂಲ ಸಂಸ್ಕೃತಿಯನ್ನು ನಮ್ಮ ತೆವಲಿಗೆ ಬೇಕಾದಂತೆ ಬಳಸಿಕೊಳ್ಳುವುದು ಹೇಯ ಕಾರ್ಯ’ ಎಂದು ಯಕ್ಷಗಾನ ಸಂಘಟಕ ಭಾಗವತ ಸುರೇಂದ್ರ ಪಣಿಯೂರು ‘ಕನ್ನಡಪ್ರಭ’ದೊಂದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.