
ದೆಹಲಿಗೆ ಕುಮಾರಸ್ವಾಮಿ ಜತೆ ಬಂದಿದ್ದ ರೇವಣ್ಣ ಯಾರೇ ಪತ್ರಕರ್ತರು ಎದುರಿಗೆ ಸಿಕ್ಕರೂ ನೋಡ್ರಿ ಒಂದು ವರ್ಷದಲ್ಲಿ ಹೊಸ ಕರ್ನಾಟಕ ಭವನ ಕಟ್ಟಿ ತೋರಿಸುತ್ತೇನೆ ಎನ್ನುತ್ತಾರೆ. ಇದನ್ನು ಕೇಳಿಸಿ ಕೊಂಡ ಪತ್ರಕರ್ತರು ಹೊಸ ಮಹಾರಾಷ್ಟ್ರ ಭವನ ನೋಡಿದ್ದೀರಾ ಎಂದು ಕೇಳಿದಾಗ ನಡೆಯಿರಿ ನೋಡೇ ಬರೋಣ ಎಂದ ರೇವಣ್ಣ, ಫೈವ್ ಸ್ಟಾರ್ ಹೋಟೆಲ್ ಥರ ಇರುವ ಮಹಾರಾಷ್ಟ್ರ ಭವನ ನೋಡಿ ದಂಗಾದರು.
ನಂತರ ಅಲ್ಲಿಗೇ ಲೋಕೋಪಯೋಗಿ ಕಾರ್ಯದರ್ಶಿಯನ್ನು ಕರೆಸಿ ತೋರಿಸಿ, ನೋಡ್ರಿ ಇಂಥದ್ದು ಕಟ್ಟಬೇಕು ತಿಳೀತಾ ಎಂದರು. ನಂತರ ಪತ್ರಕರ್ತರನ್ನು ಸಿಎಂ ಸೂಟ್‌ಗೆ ಕರೆದು ಜಬರ್ದಸ್ತಿಯಲ್ಲಿ ಊಟಕ್ಕೆ ಕೂರಿಸಿದರು. ಪಾಪ ಸ್ವಯಂ ಸಿಎಂ ಊಟಕ್ಕೆ ಬಂದಾಗ ಅಲ್ಲಿ ಜಾಗ ಇರಲಿಲ್ಲ. ಇದನ್ನು ಗಮನಿಸಿದ ರೆಸಿಡೆಂಟ್ ಕಮಿಷನರ್ ನಿಲಯ್ ಮಿತಾಶ್ ಸಿಬ್ಬಂದಿ ಮೇಲೆ ಕೂಗಾಡಿದರು. ಇದನ್ನೆಲ್ಲ ನೋಡುತ್ತಿದ್ದರೆ ಸಿಎಂ ಕಾರ್ಯಾಭಾರದಲ್ಲಿ ಕಾಂಗ್ರೆಸ್‌ನವರನ್ನು ಸಂಭಾಳಿಸುವುದು ಒಂದು ಭಾಗವಾದರೆ ಸ್ವಂತ ಅಣ್ಣ ರೇವಣ್ಣರ ಸ್ಪೀಡ್ ನಿಯಂತ್ರಿಸುವುದು ಇನ್ನೊಂದು ಭಾಗ ಎಂಬುದು ನಿಶ್ಚಿತ.
(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.