
ವಿಧಾನಸಭೆಯಲ್ಲಿ ಚಾಮುಂಡೇಶ್ವರಿಯಿಂದ ಸೋತ ನಂತರ ಸಿದ್ದರಾಮಯ್ಯ ಅವರಿಗೆ ಚುನಾವಣೆ ಎಂದರೆ ಬೇಸರ ಆಗಿದೆಯಂತೆ. 1978ರಲ್ಲಿ ಮೊದಲ ಬಾರಿಗೆ ತಾಲೂಕು ಬೋರ್ಡ್ ಚುನಾವಣೆಗೆ ನಿಂತಿದ್ದೆ. ಆಗಿನಿಂದ ನನಗೆ ಎಲ್ಲ ಜಾತಿಯವರು ವೋಟು ಹಾಕೋರು.
ಆದರೆ 2006ರ ಉಪ ಚುನಾವಣೆಯಲ್ಲಿ ಮೊದಲ ಬಾರಿ ಜಾತಿ ಪ್ರಜ್ಞೆ ಮೇಲೆ ಚಾಮುಂಡೇಶ್ವರಿಯಲ್ಲಿ ಮತದಾನ ನಡೆಯಿತು. ಎಷ್ಟು ಕೆಲಸ ಮಾಡಿದ್ರೂ ದುಡ್ಡೇ ಮುಖ್ಯ ಆದರೆ ಏನ್ ಮಾಡೋದು ಹೇಳಿ. 1983ರಲ್ಲಿ ಮೊದಲ ಬಾರಿಗೆ ಶಾಸಕನಾಗಲು ಚುನಾವಣೆಗೆ ನಿಂತಾಗ 65 ಸಾವಿರ ಹಣವನ್ನು ಜನರೇ ಸಂಗ್ರಹಿಸಿ ಕೊಟ್ಟಿದ್ದರು.
ಆದರೆ ಈಗ ಚುನಾವಣೆ ಎಂದರೆ ಹೆದರಿಕೆ ಆಗುತ್ತದೆ. ಇದಕ್ಕೆ ಏನಾದರೂ ಕಾನೂನು ತರಬೇಕು ಬಿಡಿ. ಇಲ್ಲವಾದರೆ ಬಡವರು, ಮಧ್ಯಮ ವರ್ಗದವರು ಚುನಾವಣೆಗೆ ನಿಲ್ಲೋಕಾಗಲ್ಲ ಎಂದು ಸೋಲಿನ ಬೇಸರದಲ್ಲಿ ಸಿದ್ದು ದಿಲ್ಲಿ ಪತ್ರಕರ್ತರ ಬಳಿ ಮನಸ್ಸಿನ ನೋವನ್ನು ಹೇಳಿ ಕೊಳ್ಳುತ್ತಿದ್ದರು.
(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.