ಸಿದ್ದರಾಮಯ್ಯನವರಿಗೆ ಚುನಾವಣೆಗೆ ನಿಲ್ಲುವ ಐಡಿಯಾ ಕೊಟ್ಟಿದ್ದು ಓರ್ವ ಪತ್ರಕರ್ತ!

Published : Jul 24, 2018, 01:07 PM IST
ಸಿದ್ದರಾಮಯ್ಯನವರಿಗೆ ಚುನಾವಣೆಗೆ ನಿಲ್ಲುವ ಐಡಿಯಾ ಕೊಟ್ಟಿದ್ದು ಓರ್ವ ಪತ್ರಕರ್ತ!

ಸಾರಾಂಶ

ಲೋಕಸಭೆಯಲ್ಲಿ ಸಿದ್ದು 2 ಬಾರಿ ನಿಂತು ಸೋತಿದ್ದರು ಮೊದಲ ಬಾರಿ ಹಣದ ಸಹಾಯ ಮಾಡಿದ್ದವರು ಚರಣ್ ಸಿಂಗ್ 

ನೀವು ಲೋಕಸಭೆಗೆ ನಿಲ್ಲಿ ಸಾರ್ ಎಂದು ಒಬ್ಬ ಯುವ ಪತ್ರಕರ್ತರೊಬ್ಬರು ಸಿದ್ದರಾಮಯ್ಯ ಬಳಿ ಹೇಳಿದರು. ಈಗಲೇ 2 ಬಾರಿ ಲೋಕಸಭೆಗೆ ನಿಂತು ಸೋತಿದ್ದೇನೆ. ಮತ್ತೆ ಸೋಲಿಸೋ ಐಡಿಯಾ ಏನಪ್ಪ ಎಂದ ಸಿದ್ದು, 1984ರಲ್ಲಿ ನಂಜುಂಡಸ್ವಾಮಿ ಹೇಳಿದರು ಎಂದು ಲೋಕಸಭೆ ಚುನಾವಣೆಗೆ ನಿಂತೆ. ಚರಣ ಸಿಂಗ್ ಒಂದು ಲಕ್ಷ ಹಣ ಕೊಟ್ಟಿದ್ದರು.

ಪ್ರೊಫೆಸರ್ ಒಂದು ಕಾರು ಕೊಟ್ಟಿದ್ದರು. ಅದು ಬಂದ್ ಆದಾಗ ನಾನೇ ತಳ್ಳಿಕೊಂಡು ಕ್ಷೇತ್ರದಲ್ಲಿ ಓಡಾಡಿದೆ. ಬರೀ 18 ಸಾವಿರ ಮತ ಬಂತು. 2ನೇ ಬಾರಿ 1991ರಲ್ಲಿ ಕೊಪ್ಪಳಕ್ಕೆ ಹೋಗಿ ನಿಂತೆ. ಎದುರು ನಿಂತಿದ್ದ ಬಸವರಾಜ್ ಪಾಟೀಲ್ ಅನ್ವರಿ ನೀವೇ ಗೆಲ್ಲುತ್ತೀರಿ ಎಂದು ಬಂದು ಕೈಕುಲುಕಿದರು. ಅವತ್ತೇ ರಾತ್ರಿ ರಾಜೀವ್ ಗಾಂಧಿ ಹತ್ಯೆ ಆಯಿತು. 10 ಸಾವಿರದಿಂದ ಸೋತೆ ಎಂದು ಹಳೇ ಕಥೆ ಹೇಳಿ ಕೊಂಡ ಸಿದ್ದು, ಒಂದೂವರೆ ಗಂಟೆ ಪತ್ರಕರ್ತರ ಜತೆ ಹರಟಿದರು.

(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ