ಹಳಿ ತಪ್ಪಿದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲು- 7 ಪ್ರಯಾಣಿಕರು ಸಾವು!

Published : Feb 03, 2019, 08:53 AM ISTUpdated : Feb 03, 2019, 08:56 AM IST
ಹಳಿ ತಪ್ಪಿದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲು- 7 ಪ್ರಯಾಣಿಕರು ಸಾವು!

ಸಾರಾಂಶ

ಬಿಹಾರ ವೈಶಾಲಿ ಜಿಲ್ಲೆ ಬಳಿ ಸೀಮಾಂಚಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ರೈಲು ದುರಂತದಲ್ಲಿ 7 ಮಂದಿ ಸಾಪನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.   

ವೈಶಾಲಿ(ಫೆ.03): ಬೆಳ್ಳಂಬೆಳಗ್ಗೆ ರೈಲು ಅಪಘಾತ ಸಂಭವಿಸಿದೆ. ಬಿಹಾರದ ವೈಶಾಲಿ ಜಿಲ್ಲಿ ಬಳಿ ಸೀಮಾಂಚಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು(ಫೆ.03) ಬೆಳಗಿನ ಜಾವ 3.38ರ ಸುಮಾರಿಗೆ ರೈಲು ಸಹದೈ ಬುಝರ್ಗ್ ಬಲಿ ಹಳಿ ತಪ್ಪಿದೆ.

ಇದನ್ನೂ ಓದಿ: ಮಮತಾ ವಿರುದ್ಧ ಮೋದಿ ಗುಡುಗು

ಸಾಮಾನ್ಯ ಬೋಗಿ, ಎಸಿ ಕೋಚ್ B3, 3 ಸ್ಲೀಪರ್ ಕೋಚ್(S8, S9, S10) ಸೇರಿಂದೆತ ಒಟ್ಟು 9 ಬೋಗಿಗಳು ಹಳಿ ತಪ್ಪಿದೆ ಎಂದು ಈಸ್ಟರ್ನ್ ರೈಲ್ಪೇ ವಕ್ತಾರ ರಾಜೇಶ್ ಕುಮಾರ್ ಹೇಳಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಸಾಗುತ್ತಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ರಕ್ಷಣಾ ಕಾರ್ಯದ ಸಹಾಯವಾಣಿ ನಂಬರ್‌ಗಳನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

 

 

ಸೀಮಾಂತಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 3 ರೈಲುಗಳ ರಸ್ತೆ ಮಾರ್ಗ ಬದಲಿಸಲಾಗಿದೆ. ಇನ್ನು ಬರೌನಿ-ಪಾಟ್ನ,  ಬರೌನಿ ಪಾಟಲಿಪುತ್ರಾ ಪ್ಯಾಸೆಂಜರ್ ಹಾಗೂ ಸೋನ್ಪುರ್ ಬರೌನಿ MEMU ರೈಲು ರದ್ದಾಗಿದೆ.

ಇದನ್ನೂ ಓದಿ:ಮಿಸ್ಡ್‌ ಕಾಲ್‌ಗಳಿಂದ ಸಿಕ್ಕಿಬಿದ್ದ ರವಿ ಪೂಜಾರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚುನಾವಣೆಗೂ ಮೊದಲೇ ಪ.ಬಂಗಾಳದಲ್ಲಿ ಬಿಜೆಪಿಗೆ ಶಾಕ್ ನೀಡಿದ ಮಮತಾ ಬ್ಯಾನರ್ಜಿ
ಮೂರುವರೆ ದಶಕಗಳಿಂದ ಇದ್ದ ಒಳ ಮೀಸಲಾತಿಗಾಗಿ ಹೋರಾಟಕ್ಕೆ ಜಯ ಸಿಕ್ಕಿದೆ: ಸಚಿವ ಮುನಿಯಪ್ಪ