ಮಹಿಳೆಯನ್ನು 7 ಕಿ.ಮೀ ಹೊತ್ತು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಯೋಧರು

By Suvarna Web dsekFirst Published Sep 4, 2017, 5:49 PM IST
Highlights

ಜ್ವರದಿಂದ ಬಳಲುತಿದ್ದ ಮಹಿಳೆಯೊಬ್ಬಳನ್ನು 7 ಕಿ.ಮೀ ಹೊತ್ತು ಸಾಗಿದ ಸಿಆರ್'ಪಿಎಫ್ ಯೋಧರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ನಕ್ಸಲ್ ಪೀಡಿತ ಪ್ರದೇಶ ಛತ್ತೀಸ್'ಗಡ'ದಲ್ಲಿ ನಡೆದಿದೆ.

ದಂತೇವಾಡ್‌(ಸೆ.04): ಜ್ವರದಿಂದ ಬಳಲುತಿದ್ದ ಮಹಿಳೆಯೊಬ್ಬಳನ್ನು 7 ಕಿ.ಮೀ ಹೊತ್ತು ಸಾಗಿದ ಸಿಆರ್'ಪಿಎಫ್ ಯೋಧರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ನಕ್ಸಲ್ ಪೀಡಿತ ಪ್ರದೇಶ ಛತ್ತೀಸ್'ಗಡ'ದಲ್ಲಿ ನಡೆದಿದೆ.

ಬೆಟ್ಟ ಗುಡ್ಡದ ನಡುವೆಯಿರುವ ಪುಟ್ಟ ಗ್ರಾಮದಲ್ಲಿ ಮಹಿಳೆಯೊಬ್ಬಳು ತೀರ್ವ ಜ್ವರದಿಂದ ಬಳಲುತ್ತಿದ್ದಳು. ಮಹಿಳೆಯ ಕುಟುಂಬಸ್ಥರು ಆ್ಯಂಬುಲೆನ್ಸ್ ಸಹಾಯ ಕೋರಿದ್ದಾರೆ. ಆದರೆ ರಸ್ತೆ ಮಾರ್ಗ ಇಲ್ಲದ ಕಾರಣ ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ.  ನಂತರ ಕುಟುಂಬಸ್ಥರು ಯೋಧರ ಸಹಾಯ ಕೋರಿದ್ದಾರೆ. ಮಹಿಳೆಯ ಸ್ಥಿತಿ ನೋಡಿದ ಸೈನಿಕರು ಸ್ಟ್ರಕ್ಚ'ರ್ ಮೂಲಕ ಕಾಲು ದಾರಿಯ ಮೂಲಕ 7 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿರುವ ಮಹಿಳೆಯು ಚೇತರಿಸಿಕೊಳ್ಳುತ್ತಿದ್ದಾಳೆ.

Latest Videos

click me!