ಸಿಸಿಟಿವಿಯಲ್ಲಿ ಕಂಡು ಬಂತು ವಿಚಿತ್ರ ಜೀವಿ: ನೀವೇನಾದ್ರೂ ನೋಡಿದ್ದೀರಾ?

Published : Jun 12, 2019, 03:44 PM ISTUpdated : Jun 12, 2019, 03:58 PM IST
ಸಿಸಿಟಿವಿಯಲ್ಲಿ ಕಂಡು ಬಂತು ವಿಚಿತ್ರ ಜೀವಿ: ನೀವೇನಾದ್ರೂ ನೋಡಿದ್ದೀರಾ?

ಸಾರಾಂಶ

ವಿಡಿಯೋದಲ್ಲಿ ಕಂಡು ಬಂತು ವಿಚಿತ್ರ ಜೀವಿ| ಸಿಸಿಟಿವಿಯಲ್ಲಿ ವಿಚಿತ್ರ ದೃಶ್ಯ ಕಂಡು ಬೆಚ್ಚಿ ಬಿದ್ದ ಮನೆ ಓನರ್|ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಈಗ ಫುಲ್ ವೈರಲ್!

ನವದೆಹಲಿ[ಜೂ.12]: ಮಹಿಳೆಯೊಬ್ಬಳು ಮಹಿಳೆ ತನ್ನ ಮನೆಗೆ ಅಳವಿಡಿಸಿದ್ದ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಬೆಚ್ಚಿ ಬಿದ್ದಿದ್ದಾರೆ. ಈ ರೆಕಾರ್ಡಿಂಗ್ ನಲ್ಲಿ ವಿಚಿತ್ರ ಪ್ರಾಣಿಯೊಂದು ಕಂಡು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಜನರು ಈ ವಿಡಿಯೋ ನೋಡಿದ ಬಳಿಕ ಚಿತ್ರ ವಿಚಿತ್ರ ಕತೆಗಳನ್ನು ಹುಟ್ಟು ಹಾಕುತ್ತಿದ್ದಾರೆ. 

ತಮ್ಮ ಮನೆಯ ಸೆಕ್ಯೂರಿಟಿ ವಿಡಿಯೋದಲ್ಲಿ ಸೆರೆಯಾದ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಿವಿಯನ್ ಗೋಮೋಸ್ 'ನಾನು ಭಾನುವಾರ ಬೆಳಗ್ಗೆ ಈ ವಿಚಿತ್ರ ಜೀವಿ ಕ್ಯಾಮರಾದಲ್ಲಿ ಕಂಡು ಬಂತು. ಇದೇನು ಎಂಬ ಮಾಹಿತಿಯನ್ನು ನಾನು ಕಲೆ ಹಾಕುತ್ತಿದ್ದೇನೆ' ಎಂದಿದ್ದಾರೆ.

ಈ ಕುರಿತಾಗಿ ಮತ್ತಷ್ಟು ಬರೆದಿರುವ ಗೋಮೋಸ್ 'ಮೊದಲ ಬಾರಿ ಈ ನೆರಳು ನಾನು ನೋಡಿದೆ. ಇದು ಬಾಗಿಲಿನ ಕಡೆಗೆ ಬರುತ್ತಿತ್ತು. ಕೇವಲ ಒಂದು ಕ್ಯಾಮರಾದಲ್ಲಿ ಮಾತ್ರ ಇದು ಕಂಡು ಬಂದಿದೆ. ಇನ್ನುಳಿದ ಎರಡು ಕ್ಯಾಮರಾಗಳಲ್ಲಿ ನಾನು ಇದನ್ನು ಹುಡುಕಿದರೂ ಸಿಕ್ಕಿಲ್ಲ. ನೀವೇನಾದರೂ ಈ ವಿಚಿತ್ರ ಜೀವಿಯನ್ನು ಗಮನಿಸಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ.

ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ  ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಿಸಲಾಗಿದೆ. ಇತ್ತ ಟ್ವಿಟರ್ ನಲ್ಲಿ ಸುಮಾರು  ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಸದ್ಯ ಈ ಜೀವಿಯ ಕುರಿತಾಗಿ ಹಲವಾರು ಊಹಾ-ಪೋಹಗಳು ಹರಿದಾಡುತ್ತಿದ್ದು, ಇದು ಅನ್ಯಗ್ರಹ ಜೀವಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

₹91 ಲಕ್ಷ ಕನ್ನ ಹಾಕಿದವರ ಸುಳಿವು ನೀಡಿದ ಬ್ಯಾಗ್‌! ಸಿನಿಮೀಯ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದ ಕಳ್ಳರು!
ಪಾರ್ಟಿ ಮಾಡಲು ಕರೆಸಿ ಡ್ರಗ್ಸ್ ನೀಡಿ ರೇ*ಪ್ ಮಾಡುವ ದಂಧೆ? ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್!