ಡಾಕ್ಟರ್ಸ್ ಸಂಘಕ್ಕೆ ಮುಜುಗರ ತಂದಿಟ್ಟ IMA ಜುವೆಲರ್ಸ್ ಪ್ರಕರಣ

By Web DeskFirst Published Jun 12, 2019, 3:23 PM IST
Highlights

IMA ಬಗ್ಗೆ ಗೊಂದಲ ಬೇಡ. ಐಎಂಎ  ಜುವೆಲರ್ಸ್ ಬೇರೆ, ಬರೀ ಐಎಂಎ (Indian Medical Association) ಬೇರೆ. ಇದೀಗ ವಂಚನೆ ಮಾಡಿರುವುದು  ಐಎಂಎ  ಜುವೆಲರ್ಸ್ ಕಂಪನಿ. ಕೆಲವರು Indian Medical Association (IMA) ವಂಚಿಸಿದೆ ಎಂದು ಭಾವಿಸಿರುವುದು ತಪ್ಪು. ಈ ಬಗ್ಗೆ Indian Medical Association ಸ್ಪಷ್ಟನೆ ನೀಡಿದೆ.

ಬೆಂಗಳೂರು, (ಜೂನ್.12): ಬೆಂಗಳೂರಿನ ಶಿವಾಜಿನಗರದ ಐಎಂಎ  ಜುವೆಲರ್ಸ್ ಬಹುಕೋಟಿ ವಂಚನೆ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿಯಾಗಿದೆ. ಐಎಂಎ  ಜುವೆಲರ್ಸ್ ಮಾಲೀಕ ಮನ್ಸೂರ್ ಅಲಿ ಖಾನ್. ಇದೀಗ ಈ ಪ್ರಕರಣ ಡಾಕ್ಟರ್ಸ್ ಸಂಘಕ್ಕೂ ಮುಜುಗರ ತಂದಿಟ್ಟಿದೆ.

IMA ವಂಚಕನ ಜತೆ ಸಚಿವ ಜಮೀರ್ ಅಹ್ಮದ್ ಖಾನ್ ನಂಟು?:ಸ್ಫೋಟ ಮಾಹಿತಿ ಬಹಿರಂಗ

IMA ಎಂದರೆ Indian Medical Association (ಭಾರತೀಯ ವೈದ್ಯಕೀಯ ಸಂಘ) ಎಂದು ಭಾವಿಸಿದ್ದಾರೆ. ಅಷ್ಟೇ ಅಲ್ಲದೇ ಸಂಸ್ಥೆಗೆ ಪೋನ್ ಮಾಡಿ ಬಾಯಿಗೆ ಬಂದಂತೆ ಬೈಯುತ್ತಿದ್ದಾರಂತೆ.

ಇದ್ರಿಂದ ಭಾರತೀಯ ವೈದ್ಯಕೀಯ ಸಂಘಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ಅದು ಈ ಕೆಳಗಿನಂತಿದೆ. 

ಮಾನ್ಯರೆ, 
 ಬಹು ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬರುತ್ತಿರುವ ಐಎಂಎ ಜುವೆಲರ್ಸ ಕಂಪೆನಿ ಬಗ್ಗೆ ವ್ಯಾಪಕ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

IMA ಎಂದರೆ Indian Medical Association-ಭಾರತೀಯ ವೈದ್ಯಕೀಯ ಸಂಘ. ಭಾರತೀಯ ವೈದ್ಯಕೀಯ ಸಂಘಕ್ಕೂ, ಐಎಂಎ ಜ್ಯುವೆಲರ್ಸ ಗೂ ಯಾವುದೇ ರೀತಿಯ ಸಂಬಂಧ ಇಲ್ಲ. 

 ಬಹಳಷ್ಟು ಜನಕ್ಕೆ ನಮ್ಮ Indian Medical Association ಬಗ್ಗೆ ತಪ್ಪು ಗ್ರಹಿಕೆಯಾಗಿದೆ. ಅನೇಕ ಜನ ಇಂಟರ್‌ನೆಟ್‌ನಲ್ಲಿ ನಮ್ಮ ಸಂಘದ ಫೋನ್ ನಂಬರ್ ಹುಡುಕಿ ನಮ್ಮ ಸಂಘದ ಕಚೇರಿಗೆ ಫೋನ್ ಮಾಡಿ ಮುಜುಗರ ಉಂಟು ಮಾಡುತ್ತಿದ್ದಾರೆ.

ಆದ್ದರಿಂದ ಇನ್ನು ಮುಂದೆ ಈ ಹಗರಣದ ಬಗ್ಗೆ ಸುದ್ದಿ ಪ್ರಕಟಿಸುವಾಗ ಸುದ್ದಿಯ ತಲೆಬರಹಗಳಲ್ಲಿ (headline) ಸ್ಪಷ್ಟವಾಗಿ "IMA ಜ್ಯುವೆಲರ್ಸ ಕಂಪೆನಿ " ಎಂದು ನಮೂದಿಸಬೇಕಾಗಿ ಎಂದು ವಿನಂತಿ.

ಹಾಗೂ ನಮಗೆ ಇಂತಹ ಸುದ್ದಿಗಳಿಂದ ಆಗುತ್ತಿರುವ ಮುಜುಗರ ತಪ್ಪಿಸಬೇಕಾಗಿ ವಿನಂತಿ. 

 ಡಾ ಅನ್ನದಾನಿ ಮ ಮೇಟಿ 
ಅಧ್ಯಕ್ಷರು, ಭಾರತೀಯ
 ವೈದ್ಯಕೀಯ ಸಂಘ
ಕರ್ನಾಟಕ ರಾಜ್ಯ.

ಡಾ ಶ್ರೀನಿವಾಸ್ ಎಸ್ 
ಗೌರವ ಕಾರ್ಯದರ್ಶಿಗಳು,
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ.

click me!