ಕಾಂಗ್ರೆಸ್‌ನಲ್ಲಿ ಬಂಡಾಯದ ವಾಸನೆ?

By Web DeskFirst Published Jun 12, 2019, 2:00 PM IST
Highlights

ರಾಹುಲ್ ಗಾಂಧಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನ | ಪಂಜಾಬ್ ಸಿಎಂ ಅಮರಿಂದರ್‌ ಸಿಂಗ್‌ ರಾಹುಲ್ ರನ್ನು ಮೊದಲಿಂದಲೂ ಕ್ಯಾರೇ ಅನ್ನೋಲ್ಲ | 

ದಿಲ್ಲಿಗೆ ಬಂದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ, ಮಗನನ್ನು ಕರೆದುಕೊಂಡು ಹೋಗಿ ಮೋದಿ ಸಾಹೇಬರನ್ನು ಅರ್ಧ ಗಂಟೆ ಮಾತನಾಡಿಸಿ, 4 ದಿನಗಳ ಹಿಂದೆ ನಡೆದಿದ್ದ ಕಾಂಗ್ರೆಸ್‌ ಕಾರ್ಯಕಾರಿ ಸಭೆಗೆ ಹಾಜರಾಗಲಿಲ್ಲ. ರಾಹುಲ್, ಕಮಲ್ ನಾಥ್‌ ಬಗ್ಗೆ ಟೀಕಿಸಿದ್ದಕ್ಕೆ ಮುಖ್ಯಮಂತ್ರಿ ಹಾಕಿದ ಗುಟುರು ಇದು.

ಇನ್ನು ಪಂಜಾಬ್ ಸಿಎಂ ಅಮರಿಂದರ್‌ ಸಿಂಗ್‌ ಅಂತೂ ರಾಹುಲ್ ರನ್ನು ಮೊದಲಿಂದಲೂ ಕ್ಯಾರೇ ಅನ್ನೋಲ್ಲ. ಇನ್ನು ರಾಜಸ್ಥಾನದಲ್ಲಿ ಕೂಡ ಸೋಲಿನ ನಂತರ ಒಳಜಗಳ ಅತಿಯಾಗಿದ್ದು, ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ರನ್ನು ದಿಲ್ಲಿಗೆ ಕರೆಸಿಕೊಳ್ಳಿ ಎಂದು ರಾಹುಲ್, ಪ್ರಿಯಾಂಕಾ ಇಬ್ಬರಿಗೂ ಮುಖದ ಮೇಲೆ ಹೇಳಿ ಬಂದಿದ್ದಾರೆ.

ಹರಿಯಾಣದಲ್ಲಂತೂ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ನೇರವಾಗಿ ದಿಲ್ಲಿ ನಾಯಕರ ವಿರುದ್ಧ ತೊಡೆ ತಟ್ಟಿದ್ದಾರೆ. ಸ್ವಲ್ಪ ದಿಲ್ಲಿ ನಾಯಕರ ಮಾತು ಕೇಳುವ ಮುಖ್ಯಮಂತ್ರಿ ಎಂದರೆ ಪುದುಚೇರಿ ಎಂಬ ಸಣ್ಣ ರಾಜ್ಯದ ನಾರಾಯಾಣ ಸ್ವಾಮಿ. ಕಾಂಗ್ರೆಸ್‌ ಹೀಗೆಯೇ ಹೀನಾಯವಾಗಿ ಸೋಲುತ್ತಾ ಇದ್ದರೆ ಬಂಡಾಯ ಸಹಜ. ಅದು ರಾಜಕಾರಣದಲ್ಲಿ ಸೋತವರಿಗೆ ಯಾವುದೇ ಕಿಮ್ಮತ್ತಿಲ್ಲ. ಇಲ್ಲಿ ಆಟ ಆಡುತ್ತಾ ಇರಬೇಕೆಂದರೆ ಗೆಲ್ಲುತ್ತಾ ಇರಬೇಕು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ ಕ್ಲಿಕ್ ಮಾಡಿ 

click me!