ಜು.17ರಂದು ರಾಷ್ಟ್ರಪತಿಗಾಗಿ ರಹಸ್ಯ ಮತದಾನ; ವಿಶೇಷ ಅಧಿವೇಶನ ಇಲ್ಲ

Published : Jul 11, 2017, 01:46 PM ISTUpdated : Apr 11, 2018, 12:58 PM IST
ಜು.17ರಂದು ರಾಷ್ಟ್ರಪತಿಗಾಗಿ ರಹಸ್ಯ ಮತದಾನ; ವಿಶೇಷ ಅಧಿವೇಶನ ಇಲ್ಲ

ಸಾರಾಂಶ

ರಾಜ್ಯದ ಶಾಸಕರು ಮತದಾನ ಮಾಡಲು ಜು.17ರಂದು ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆ ವರೆಗೂ ಮತದಾನ ನಡೆಯಲಿದೆ. ರಾಜ್ಯದ 224 ಶಾಸಕರು ಮಾತ್ರ ಮತದಾನ ನಡೆಸಲು ಅರ್ಹರಿರುತ್ತಾರೆ.

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಜು.17ರಂದು ರಾಜ್ಯ ವಿಧಾನಸಭಾ ಸದಸ್ಯರು ವಿಧಾನಸೌಧದಲ್ಲಿ ಮತದಾನ ಮಾಡಲಿದ್ದಾರೆ. ಆದರೆ ಇದಕ್ಕಾಗಿ ಯಾವುದೇ ವಿಶೇಷ ಅಧಿವೇಶನ ನಡೆಸದಿರಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಪತ್ರಕರ್ತರ ಹಕ್ಕುಚ್ಯುತಿ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ವಿಶೇಷ ಅಧಿವೇಶನ ನಡೆಯುವುದಿಲ್ಲ ಎಂದು ವಿಧಾನಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಪತಿ ಸ್ಥಾನಕ್ಕೆ ರಾಮನಾಥ್ ಕೋವಿಂದ್, ಮೀರಾ ಕುಮಾರ್ ಅವರು ಸ್ಪರ್ಧಿಸಿರುವುದರಿಂದ ಒಬ್ಬರ ಆಯ್ಕೆಗೆ ದೇಶಾದ್ಯಂತ ಜನಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಅದೇರೀತಿ ರಾಜ್ಯದ ಶಾಸಕರು ಮತದಾನ ಮಾಡಲು ಜು.17ರಂದು ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆ ವರೆಗೂ ಮತದಾನ ನಡೆಯಲಿದೆ. ರಾಜ್ಯದ 224 ಶಾಸಕರು ಮಾತ್ರ ಮತದಾನ ನಡೆಸಲು ಅರ್ಹರಿರುತ್ತಾರೆ. ವಿಧಾನಸಭೆ ಕಾರ್ಯದರ್ಶಿಗಳೇ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ

ಉಳಿದಂತೆ ಲೋಕಸಭಾ ಸದಸ್ಯರು ಸಂಸತ್‌'ನಲ್ಲಿ ನಡೆಯುವ ಮತದಾನದಲ್ಲಿ ಭಾಗವಹಿಸದಿದ್ದರೆ ಪೂರ್ವಾನುಮತಿ ಪಡೆದು ರಾಜ್ಯದಲ್ಲಿ ಶಾಸಕರೊಂದಿಗೆ ಮತದಾನ ಮಾಡಬಹುದು. ಇದು ರಹಸ್ಯ ಮತದಾನವಾಗಿರುವ ಕಾರಣ ಶಾಸಕರು ಮತದಾನ ಮಾಡಿ ಯಾರಿಗೂ ತೋರಿಸುವ ಅಗತ್ಯವಿಲ್ಲ. ಆದರೆ ತಮ್ಮ ಪಕ್ಷಗಳು ವಿಪ್ ಜಾರಿಗೊಳಿಸುವುದರಿಂದ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುತ್ತಾರೆ. ವಿಶೇಷ ಅಧಿವೇಶನ ರಹಿತವಾಗಿ ಬರೀ ಮತದಾನ ನಡೆಯುತ್ತಿರುವ ಕುರಿತು ಚುನಾವಣಾಧಿಕಾರಿಗಳು ಈಗಾಗಲೇ ಆಡಳಿತ ಮತ್ತು ಪ್ರತಿಪಕ್ಷಗಳ ಮುಖ್ಯ ಸಚೇತಕರಿಗೆ ಸೂಚನಾ ಪತ್ರ ರವಾನಿಸಿದ್ದಾರೆ. ಇದನ್ನಾಧರಿಸಿ ಜುಲೈ 17ರಂದು ಬೆಳಗ್ಗೆ 9ಗಂಟೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದು, ನಂತರ ಶಾಸಕರು ಮತದಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಕ್ಕುಚ್ಯುತಿ ಅಧಿವೇಶನ ಇಲ್ಲ:
ಪತ್ರಕರ್ತರಾದ ರವಿಬೆಳೆಗೆರೆ ಮತ್ತು ಅನಿಲ್‌'ರಾಜ್ ಅವರ ವಿರುದ್ಧದ ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ನಡೆದಿರಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ವಿಶೇಷ ಅಧಿವೇಶನ ಕರೆದು ಹಕ್ಕುಚ್ಯುತಿ ವಿಚಾರಗಳನ್ನು ಪ್ರಸ್ತಾಪಿಸಿ, ಜೈಲು ಶಿಕ್ಷೆ ಪುನರ್ ಪರಿಶೀಲಿಸುವ ಸಾಧ್ಯತೆ ಇತ್ತು.

ಆದರೆ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲೇ ಅಧಿವೇಶನ ನಡೆಯುತ್ತಿಲ್ಲ. ಅಂದಮೇಲೆ ಹಕ್ಕುಚ್ಯುತಿ ವಿಚಾರಕ್ಕೆ ಅಧಿವೇನ ನಡೆಸುವ ಸಾಧ್ಯತೆ ಇಲ್ಲ. ಬದಲಾಗಿ ಪತ್ರಕರ್ತರು ಈಗಾಗಲೇ ಸಲ್ಲಿಸಿರುವ ಶಿಕ್ಷೆ ಪುನರ್ ಪರಿಶೀಲನಾ ಮನವಿಯನ್ನು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?