
ಬೆಂಗಳೂರು(ಜು.12): ಸರ್ಕಾರ ಬಡ ಮಕ್ಕಳಿಗೆ ಆರ್'ಟಿಇ ಅಡಿಯಲ್ಲಿ ಉಚಿತ ಶಿಕ್ಷಣ ನೀಡುತ್ತಾ ಬರುತ್ತಿದೆ. ಆದರೆ ಸರ್ಕಾರದ ಈ ಉಚಿತ ಶಿಕ್ಷಣ ಬಡ ಮಕ್ಕಳಿಗೆ ಮಾತ್ರ ಸಿಗ್ತಿಲ್ಲ. ಕಡ್ಡಾಯ ಶಿಕ್ಷಣ ಕಾಯಿದೆ ಅಡಿಯಲ್ಲಿ ಸೀಟು ಸಿಕ್ಕಿದ್ದರೂ ವಿದ್ಯಾಭ್ಯಾಸ ಸಿಗದೆ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಮಕ್ಕಳ ಪಾಲಾಗಿದೆ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ವಿವರ
ಸೈಂಟ್ ಜೋಸೆಫ್ ಶಾಲೆ ಕಮಲಾನಗರದಲ್ಲಿ ಮೊದಲು ಪ್ರಾರಂಭವಾದ ಈ ಶಾಲೆ 2017-2018ರ ಸಾಲಿನ ವಿದ್ಯಾಭ್ಯಾಸವನ್ನು ಕುರುಬರಹಳ್ಳಿಯ ಜೆಸಿ ನಗರದಲ್ಲಿ ನೀಡುತ್ತಿದೆ. ಕುರುಬರಹಳ್ಳಿಯಲ್ಲಿ ಕಡ್ಡಾಯ ಶಿಕ್ಷಣ ಕಾಯಿದೆ ಅಡಿಯಲ್ಲಿ ಆಯ್ಕೆಯಾದ 5 ಮಕ್ಕಳಿಗೆ ಮಾತ್ರ ಶಿಕ್ಷಣ ನೀಡುತ್ತಿತ್ತು. ಈಗ RTE ವಿದ್ಯಾರ್ಥಿಗಳಿಗೆ ಸೀಟು ನೀಡದೆ ವಂಚಿಸಿದೆ ಅಂತ ಪೋಷಕರು ಆರೋಪಿಸಿದ್ದಾರೆ.
ವರ್ಷ ಸೈಂಟ್ ಜೋಸೆಫ್ ಶಾಲೆ ನಗರದ ಬೇರೆ ಬೇರೆ ಕಡೆಗಳಲ್ಲಿ ಆರಂಭವಾಗುತ್ತಿದೆ. ಆಗಲೂ RTE ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಿದ್ದರು. ಆದರೆ ಈ ಬಾರಿ ಆರ್ಟಿಇ ವಿದ್ಯಾರ್ಥಿಗಳಿರಬೇಕಾದ ತರಗತಿಯಲ್ಲಿ ಬೇರೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಶಾಲಾ ಆಡಳಿತ ಮಂಡಳಿ ಹಣ ವಸೂಲಿ ಮಾಡ್ತಿದೆ ಅಂತ ಪೋಷಕರು ಆರೋಪಿಸಿದ್ದಾರೆ. ಆದರೆ, ಇದೆಲ್ಲಾ ಸುಳ್ಳು ಅಂತಿದ್ದಾರೆ ಶಾಲಾ ಆಡಳಿತ ಮಂಡಳಿಯವರು.
ಬಡ ಮಕ್ಕಳು ಕೂಡ ಶ್ರೀಮಂತ ಮಕ್ಕಳಂತೆ ಕಲೀಬೇಕು ಅನ್ನೊ ಉದ್ದೇಶದಿಂದ ಸರ್ಕಾರ ಆರ್'ಟಿಇ ಅಡಿಯಲ್ಲಿ ಉಚಿತ ಶಿಕ್ಷಣ ನೀಡ್ತಿದೆ. ಆದ್ರೆ, ದೇವರು ಕೊಟ್ಟರೂ ಪೂಜಾರಿ ಬಿಡ ಅನ್ನೋ ಹಾಗಾಗಿದೆ ಬಡ ವಿದ್ಯಾರ್ಥಿಗಳ ಪರಿಸ್ಥಿತಿ. ಈ ಬಗ್ಗೆ ಕೂಡಲೆ ಶಿಕ್ಷಣ ಇಲಾಖೆ ಎಚ್ಚೆತ್ತು RTE ಮಕ್ಕಳ ಉಜ್ವಲ ಭವಿಷ್ಯಕ್ಕೆ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.