
ಬೆಂಗಳೂರು(ಜು.12): ಮನೆಗೆ ಮಾರಿ ಊರಿಗೆಲ್ಲ ಉಪಕಾರಿ ಅನ್ನೋ ಮಾತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರಿಯಾಗಿ ಹೊಂದುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕ್ರಮದಿಂದಾಗಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನಮ್ಮ ರಾಜ್ಯದ ಮೇಲೆ ತುಂಬಾ ಪ್ರೀತಿ ಮೂಡಿದೆ. ಆದರೆ ನಮ್ಮ ವಿದ್ಯಾರ್ಥಿಗಳು ಪೋಷಕರು KEA ಹೇಟ್ ಯೂ ಅಂತಿದ್ದಾರೆ. ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್.
ಹೊರಗಿನವರಿಗೆ ಮಣೆ..!
ದೇಶಾದ್ಯಂತ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಆಯ್ಕೆಗೆ ಏಕರೂಪದ ಪ್ರವೇಶ ಪರೀಕ್ಷೆ ನೀಟ್ ನಡೆದಿತ್ತು. ಇದರ ಆಧಾರದ ಮೇಲೆ ಯಾವುದೇ ರಾಜ್ಯದಲ್ಲಿ ಬೇಕಾದರೂ ಭಾರತೀಯ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಡೆಂಟಲ್ ಸೀಟುಗಳನ್ನ ಪಡೆದುಕೊಳ್ಳಬಹುದು. ಆದರೆ ವಾಸ್ತವವೇ ಬೇರೆ ಇದೆ. ರಾಜ್ಯದ ವಿದ್ಯಾರ್ಥಿಗಳಿಗೆ ಹೊರ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಕೇವಲ ಶೇ.15 ರಷ್ಟು ಸೀಟು ಲಭ್ಯವಾಗುತ್ತಿದೆ. ಹೊರ ರಾಜ್ಯಗಳ ಶೇ.85 ರಷ್ಟು ಸೀಟುಗಳನ್ನು ಆಯಾಯ ರಾಜ್ಯಗಳು ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಟ್ಟಿವೆ. ನಮ್ಮ ರಾಜ್ಯದಲ್ಲೂ ಕನ್ನಡಿಗ ವಿದ್ಯಾರ್ಥಿಗಳಿಗೆ ಮೋಸವಾಗ್ತಿದ್ದು ಹೆಚ್ಚಿನ ಸೀಟುಗಳನ್ನ ಹೊರ ರಾಜ್ಯದವರಿಗೆ ಮೀಸಲಿನ ಆರೋಪ ಕೇಳಿ ಬಂದಿದೆ..
ಕಾಮೆಡ್ ಕೆ ಕಾಲೇಜುಗಳ ಸೀಟುಗಳಲ್ಲೂ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ರೆಡ್ ಕಾರ್ಪೇಟ್. ಇನ್ನು ಧಾರ್ಮಿಕ ಅಲ್ಪ ಸಂಖ್ಯಾತ ಕಾಲೇಜುಗಳಲ್ಲೂ ಕೂಡ ದುಡ್ಡು ಕೊಟ್ಟರೆ ಸಾಕು ನಮ್ಮವರೇ ಆಗ್ಬೇಕಿಲ್ಲ ಅನ್ನೋ ಸ್ಥಿತಿ. ಈ ಎಲ್ಲದರ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದೆ.
ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನಮ್ಮ ಮೆಡಿಕಲ್ ಸೀಟುಗಳನ್ನು ಬಿಟ್ಟು ಕೊಟ್ಟರೆ ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಯಾಗೋದು ಖಚಿತ. ಇದೇ ಕಾರಣಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಸಂಘ ಮತ್ತು ಪೋಷಕರೂ ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ಕ್ರಮ ವಿರುದ್ದ ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.