ಚಿಕ್ಕಮಗಳೂರು, ಕೊಡಗಲ್ಲಿ ಮತ್ತೆ ಶಾಲಾ-ಕಾಲೇಜು ಶುರು

By Web DeskFirst Published Aug 16, 2019, 12:15 PM IST
Highlights

ಚಿಕ್ಕಮಗಳೂರು, ಕೊಡಗಿನಲ್ಲಿ ಶಾಲೆ- ಕಾಲೇಜು ಆರಂಭ | ಪ್ರವಾಹದಿಂದಾಗಿ ಕಟ್ಟಡಕ್ಕೆ ಹಾನಿಯಾಗಿರುವ ಶಾಲಾ ಕಾಲೇಜುಗಳನ್ನು ಇನ್ನೂ ಆರಂಭಿಸಿಲ್ಲ.

ಬೆಂಗಳೂರು (ಆ. 16): ಪರಿಹಾರ ಕೇಂದ್ರಗಳನ್ನು ತೆರೆದಿರುವ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜು ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗನವಾಡಿ ಕೇಂದ್ರ, ಶಾಲಾ, ಕಾಲೇಜುಗಳು ಆ.೧೬ರಿಂದ
ಕೊಡಗು, ಚಿಕ್ಕಮಗಳೂರಿನಲ್ಲಿಯೂ ಪುನರಾರಂಭಗೊಳ್ಳಲಿವೆ.

ಚಿಕ್ಕಮಗಳೂರು: ನೆರೆ ಸಂತ್ರಸ್ತರಿಗೆ 7 ಸಾವಿರ ಚಪಾತಿ, ಅಗತ್ಯ ವಸ್ತುಗಳ ರವಾನೆ

Latest Videos

ಈಗಾಗಲೇ ಪ್ರವಾಹ ಪೀಡಿತ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಆದರೆ, ಪ್ರವಾಹದಿಂದಾಗಿ ಕಟ್ಟಡಕ್ಕೆ ಹಾನಿಯಾಗಿರುವ ಶಾಲಾ ಕಾಲೇಜುಗಳನ್ನು ಇನ್ನೂ ಆರಂಭಿಸಿಲ್ಲ.

ಮಲೆನಾಡಲ್ಲಿ ಮುಂದುವರಿದ ಭೂ ಕುಸಿತ : ಹಲವು ಪ್ರದೇಶಗಳ ಸಂಪರ್ಕ ಕಡಿತ

ಮುಳ್ಳಯನಗಿರಿ ರಸ್ತೆ 15 ದಿನ ಬಂದ್ 

ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿ, ಬಾಬಾಬುಡ ನ್‌ಗಿರಿ, ಮಾಣಿಕ್ಯಧಾರಾ ಸಂಪರ್ಕಿಸುವ ರಸ್ತೆಗಳಲ್ಲಿ ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಆ.30 ರ ವರೆಗೆ ಈ ಭಾಗದಲ್ಲಿ ಪ್ರವಾಸಿಗರ ವಾಹಗಳಿಗೆ ಸಂಚಾರ ನಿಷೇಧಿಸಲಾಗಿದೆ. 

click me!