ಪತಿ ಜೊತೆಗೆ ಬಂದು ಮೋದಿಗೆ ಪಾಕ್‌ ಸೋದರಿ ರಾಖಿ

By Web Desk  |  First Published Aug 16, 2019, 11:54 AM IST

ರಕ್ಷಾ ಬಂಧನದ ದಿನ ಪಾಕ್ ಸಹೋದರಿ ಭಾರತಕ್ಕೆ ಪತಿಯೋಡನೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷವೂ ಶುಭಕೋರಿದ್ದಾರೆ. 


ನವದೆಹಲಿ [ಆ.16]: ‘ರಾಖಿ ಸಿಸ್ಟರ್‌’ ಎಂದೇ ಕರೆಸಿಕೊಳ್ಳುವ ಪಾಕಿಸ್ತಾನ ಮೂಲದ ಖಮರ್‌ ಮೊಹ್ಸೀನ್‌ ಶೇಖ್‌, ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ಪತಿ ಜತೆಗೂಡಿ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕೆ ಬಂದು ರಾಖಿ ಕಟ್ಟಿ ಶುಭಾಶಯ ಕೋರಿದರು. 

ಮಕ್ಕಳ ಜೊತೆ ಮಗುವಾದ ಪ್ರಧಾನಿ ಮೋದಿ

Tap to resize

Latest Videos

ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದ ಸಮಯದಿಂದಲೂ ರಕ್ಷಾಬಂಧನದ ದಿನ ರಾಖಿ ಕಟ್ಟುವ ಖಮರ್‌ ಬಳಿಕ ಮಾತನಾಡಿ, ತ್ರಿವಳಿ ತಲಾಖ್‌ ಮಸೂದೆಗೆ ಅಂಗೀಕಾರ ಪಡೆದು, ಮುಸ್ಲಿಂ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಬಗ್ಗೆ ಧನ್ಯವಾದ ಹೇಳಿದರು. 

ಮೂರು ಪಡೆಗೆ ಓರ್ವ ಮುಖ್ಯಸ್ಥ: ಮೋದಿ ಘೋಷಣೆ, ರಾಜೀವ್ ಆಲೋಚನೆ!

ಹಿರಿಯಣ್ಣನಿಗೆ ಪ್ರತಿವರ್ಷವೂ ರಾಖಿ ಕಟ್ಟುವ ಸೌಭಾಗ್ಯ ನನಗೆ ಸಿಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಇನ್ನೈದು ವರ್ಷ ಅಧಿಕಾರದಲ್ಲಿದ್ದು, ಉತ್ತಮ ಆಡಳಿತ ನೀಡುವುದರ ಜೊತೆಗೆ ಉತ್ತಮ ನಿರ್ಣಯಗಳನ್ನು ಕೈಗೊಳ್ಳಲಿ ಎಂದು ಹೇಳಿದರು.

ರಾಖಿ ಕಟ್ಟಿದ ಇಶ್ರತ್ ಜಹಾನ್ : ತ್ರಿವಳಿ ತಲಾಖ್ ನಿಷೇಧಕ್ಕೆ ಕಾರಣವಾದ ಇಶ್ರತ್ ಜಹಾನ್ ಕೂಡ ಮೋದಿಗೆ ರಾಖಿ ಕಟ್ಟಿ ಶುಭ ಹಾರೈಸಿದ್ದಾರೆ. 

click me!