ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ದುರ್ಬಳಕೆ: ಕನ್ನಡಿಗನಿಗೆ ‘ಸುಪ್ರೀಂ’ ದಂಡ

By Suvarna Web DeskFirst Published Jul 3, 2017, 11:12 PM IST
Highlights

ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಪಿಐಎಲ್ ದುರ್ಬಳಕೆ ಮಾಡಿದ್ದೀರಿ ಅಂತ ಅಭಿಪ್ರಾಯ ವ್ಯಕ್ತಪಡಿಸಿ 25 ಲಕ್ಷ ರೂ. ದಂಡ ವಿಧಿಸಿದೆ.

ನವದೆಹಲಿ(ಜು.03): ಪಿಐಎಲ್ ಅಂದ್ರೆ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನ ದುರ್ಬಳಕೆ ಮಾಡಿದ್ದಕ್ಕೆ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಅವರಿಗೆ ಸುಪ್ರೀಂ ಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡುವ ಸಂಬಂಧ ಅಬ್ರಾಹಂ ಪಿಐಎಲ್ ಸಲ್ಲಿಸಿದ್ದರು. ಖಾಸಗಿಯವರು ಜಾಗ ನೀಡಿದ್ದರೂ ಸರ್ಕಾರಿ ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುತ್ತಿದೆ ಅಂತ ಅಬ್ರಾಹಂ ಅರ್ಜಿಯಲ್ಲಿ ದೂರಿದ್ದರು. ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಪಿಐಎಲ್ ದುರ್ಬಳಕೆ ಮಾಡಿದ್ದೀರಿ ಅಂತ ಅಭಿಪ್ರಾಯ ವ್ಯಕ್ತಪಡಿಸಿ 25 ಲಕ್ಷ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಈ ದಂಡವನ್ನು ಎರಡು ವಾರದಲ್ಲಿ ಕಟ್ಟುವಂತೆ ಸೂಚಿಸಿದೆ. ಪ್ರಕರಣ ಸಂಬಂಧಪಟ್ಟಂತೆ ರಾಜ್ಯದ ಪರ ಅಡ್ವೋಕೇಟ್ ಜನರಲ್ ಮಧುಸೂದನ್ ವಾದ ಮಂಡಿಸಿದ್ದರು.

click me!