26 ವಾರಗಳ ಗರ್ಭಿಣಿಗೆ ಗರ್ಭಪಾತಕ್ಕೆ ಸುಪ್ರೀಂ ಅವಕಾಶ

Published : Jul 03, 2017, 10:42 PM ISTUpdated : Apr 11, 2018, 12:51 PM IST
26 ವಾರಗಳ ಗರ್ಭಿಣಿಗೆ ಗರ್ಭಪಾತಕ್ಕೆ ಸುಪ್ರೀಂ ಅವಕಾಶ

ಸಾರಾಂಶ

ಕೋಲ್ಕತ್ತಾದ 33 ವರ್ಷದ ಮಹಿಳೆಯೊಬ್ಬರು ತನ್ನ ಗರ್ಭದ ಶಿಶುವಿಗೆ ಜನ್ಮಜಾತ ಸಮಸ್ಯೆಗಳಿದ್ದು, ಮಗು ಜನಿಸಿದ ನಂತರ ಬದುಕುವ ಸಾಧ್ಯತೆ ಕಡಿಮೆಯಿರುವ ಕಾರಣದಿಂದ ತನಗೆ ಗರ್ಭಪಾತ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ವ್ಯದ್ಯರ ವರದಿಯೊಂದಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ  ದೀಪಕ್ ಮಿಶ್ರಾ ಹಾಗೂ ಎ.ಎಂ. ಕಾನ್'ವಿಲ್ಕರ್ ಇದ್ದ ದ್ವಿಸದಸ್ಯ ನ್ಯಾಯಪೀಠ ಆದೇಶ ನೀಡಿದೆ.

ನವದೆಹಲಿ(ಜು.03): ಗರ್ಭಿಣಿಗೆ 26 ತಿಂಗಳವರೆಗೂ ಜನ್ಮಜಾತ ಸಮಸ್ಯೆಗಳಿದ್ದರೆ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಆದೇಶದಿಂದ ಗರ್ಭಪಾತ ಕಾನೂನಿನಲ್ಲಿನ ತಿದ್ದುಪಡಿಯನ್ನು 20 ವಾರಗಳ ಮೀರಿ ಅವಕಾಶ ನೀಡಲಾಗಿದೆ.

ಕೋಲ್ಕತ್ತಾದ 33 ವರ್ಷದ ಮಹಿಳೆಯೊಬ್ಬರು ತನ್ನ ಗರ್ಭದ ಶಿಶುವಿಗೆ ಜನ್ಮಜಾತ ಸಮಸ್ಯೆಗಳಿದ್ದು, ಮಗು ಜನಿಸಿದ ನಂತರ ಬದುಕುವ ಸಾಧ್ಯತೆ ಕಡಿಮೆಯಿರುವ ಕಾರಣದಿಂದ ತನಗೆ ಗರ್ಭಪಾತ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ವ್ಯದ್ಯರ ವರದಿಯೊಂದಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ  ದೀಪಕ್ ಮಿಶ್ರಾ ಹಾಗೂ ಎ.ಎಂ. ಕಾನ್'ವಿಲ್ಕರ್ ಇದ್ದ ದ್ವಿಸದಸ್ಯ ನ್ಯಾಯಪೀಠ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ಈ ಮೊದಲು ಮಹಿಳೆಯ ಆರೋಗ್ಯದ ಬಗ್ಗೆ ವರದಿ ನೀಡುವಂತೆ ಸರ್ಕಾರಿ ವ್ಯದ್ಯರಿದ್ದ ಮಂಡಳಿ ರಚಿಸಲು ಸೂಚಿಸಿತ್ತು.  ಈ ಮಂಡಳಿ ಸಂಪೂರ್ಣವಾಗಿ ಪರೀಕ್ಷಿಸಿ ಗರ್ಭಪಾತ ಮಾಡಬಹುದು ಎಂದು ವರದಿ ನೀಡಿತ್ತು. ವರದಿಯನ್ನು ಆಧರಿಸಿದ ದ್ವಿಸದಸ್ಯ ಪೀಠ  ತಕ್ಷಣವೇ ಗರ್ಭಪಾತ ಮಾಡಿಕೊಳ್ಳಲು ಆದೇಶ ನೀಡಿದೆ.

ವೈದ್ಯಕೀಯ ಟರ್ಮಿನೇಷನ್ 1971ರ ಗರ್ಭೀಣಿಯರ ಕಾಯಿದೆ ಪ್ರಕಾರ ಗರ್ಭಿಣಿಯರು 20 ವಾರಗಳವರೆಗೂ ಗರ್ಭಪಾತ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ 20 ವಾರದ ನಂತರ ಗರ್ಭಿಣಿಯರಿಗೆ ಸಮಸ್ಯೆಯುಂಟಾದರೆ ಗರ್ಭಪಾತ ಮಾಡಿಕೊಳ್ಳಲು ಅವಕಾಶವಿರಲಿಲ್ಲ. ಹಲವು ಮಹಿಳೆಯರು ಈ ಕಾನೂನನ್ನು ಮಾರ್ಪಡಿಸಬೇಕೆಂದು ಸುಪ್ರೀಂ ಮೋರೆ ಹೋಗಿದ್ದರು. ತದ ನಂತರ ಸುಪ್ರೀಂ ಕೆಲವು ಪ್ರಕರಣಗಳಲ್ಲಿ 24 ವಾರಗಳ ಕಾಲದವರೆಗೆ ಅವಕಾಶ ನೀಡಿದರೆ, ಮತ್ತು ಕೆಲವನ್ನು ತಿರಸ್ಕರಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!