ರಾಮಮಂದಿರ ತುರ್ತು ವಿಚಾರಣೆ ಇಲ್ಲವೇ ಇಲ್ಲ

By Web DeskFirst Published Nov 12, 2018, 3:09 PM IST
Highlights

ರಾಮ ಮಂದಿರ ವಿಚಾರಣೆಗೆ ಸಂಬಂಧ ಸುಪ್ರೀಂ ಕೋರಟ್ ತನ್ನ ಹಿಂದಿನ ಮಾತನ್ನೇ ಮತ್ತೆ ಪುನರ್ ಉಚ್ಚಾರ ಮಾಡಿದೆ. ಅಯೋಧ್ಯೆ ರಾಮ ಮಂದಿರ ವಿವಾದಕ್ಕೆ ಸಲ್ಲಿಸಿದ್ದ ತುರ್ತು ಅರ್ಜಿ ಪರಿಶೀಲನೆ ಸಾಧ್ಯವಿಲ್ಲ ಎಂದು ಹೇಳಿದೆ.

ನವದೆಹಲಿ(ನ.12)  ಅಯೋಧ್ಯೆ ರಾಮ ಮಂದಿರ ವಿವಾದ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳನ್ನು ತುರ್ತು ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. 

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಹಾಗೂ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರಿದ್ದ ಪೀಠ ತುರ್ತು ಅರ್ಜಿ ಪರಿಶೀಲನೆ ನಡೆಸಲು ತಿರಸ್ಕರಿಸಿದೆ.  ಅಯೋಧ್ಯೆ ವಿವಾದ ಸಂಬಂಧ ಈಗಾಗಲೇ ನಾವು ತೀರ್ಪು ನೀಡಿದ್ದೇವೆ. ಮುಂದಿನ ಜನವರಿಯಲ್ಲಿ ನಿಗದಿಯಂತೆ ಅರ್ಜಿ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದೆ. 

‘ವಿದೇಶಗಳಲ್ಲಿ ಮಸೀದಿ ಸುತ್ತುವ ಮೋದಿ ರಾಮಜನ್ಮಭೂಮಿಗೇಕೆ ಬಂದಿಲ್ಲ’?

ಇದನ್ನು ರಾಮಜನ್ಮಭೂಮಿ ವಿವಾದ ಎನ್ನುವುದಕ್ಕಿಂತ ಜಮೀನು ವ್ಯಾಜ್ಯ ಎಂದು ಸುಪ್ರೀಂ ಪರಿಗಣಿಸುವ  ಮಾತನ್ನಾಡಿದೆ.  ಸೀವಿಲ್ ವ್ಯಾಜ್ಯವಾಗಿರುವುದರಿಂದ ತುರ್ತು ವಿಚಾರಣೆ ಅಗತ್ಯ ಇಲ್ಲ ಎಂದು ಹಿಂದೆಯೇ ಹೇಳಿದೆ.

2010ರಲ್ಲಿ ಅಲಹಾಬಾದ್ ಹೈಕೋರ್ಟ್ ರಾಮ ಜನ್ಮಭೂಮಿಯನ್ನು 3 ಭಾಗಗಳಾಗಿ ಹಂಚಿತ್ತು. ಇದನ್ನು ಪ್ರಶ್ನಿಸಿ ವಿವಿಧ ವರ್ಗಗಳ ಕಕ್ಷಿದಾರರು ಈ ಹಿಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಅಕ್ಟೋಬರ್ 29 ರಂದು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೋಯ್, ನ್ಯಾ.ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾ.ಕೆ.ಎಂ ಜೋಸೆಫ್ ಅವರ ತ್ರಿಸದಸ್ಯ ಪೀಠ, 2019ರ ಜನವರಿ ತಿಂಗಳಿಗೆ ವಿಚಾರಣೆ ಮುಂದೂಡಿತ್ತು. 


 

click me!