ಎಸ್‌ಬಿಐ ಗ್ರಾಹಕರೇ ಗಮನಿಸಿ : ಎಟಿಎಂ ವಿತ್‌ಡ್ರಾ ಮಿತಿ ಇಳಿಕೆ

By Web DeskFirst Published Oct 31, 2018, 11:09 AM IST
Highlights

ನೀವು ಎಸ್ ಬಿ ಐ ಗ್ರಾಹಕರಾಗಿದ್ದಲ್ಲಿ ಇಲ್ಲೊಮ್ಮೆ ಗಮನಿಸಿ. ಇದುವರೆಗೂ ಎಟಿಎಂ ನಲ್ಲಿ  ಹಣವನ್ನು ಡ್ರಾ ಮಾಡಲು ಇದ್ದ ಮಿತಿಯನ್ನು ಇಳಿಕೆ ಮಾಡಲಾಗಿದೆ. 40 ಸಾವಿರ ಇದ್ದ ಮಿತಿಯನ್ನು 20 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. 

ನವದೆಹಲಿ: ಎಟಿಎಂಗಳಿಂದ ದಿನವೊಂದಕ್ಕೆ ಹಣ ಹಿಂಪಡೆಯುವ ಮಿತಿಯನ್ನು 40 ಸಾವಿರ ರು.ನಿಂದ 20 ಸಾವಿರ ರು.ಗೆ ಕಡಿತಗೊಳಿಸುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿರ್ಧಾರ ಬುಧವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಮೊದಲಿನಂತೆ ಅಧಿಕ ಹಣವನ್ನು ಎಟಿಎಂನಿಂದ ಪಡೆಯಲು ಎಸ್‌ಬಿಐ ಗ್ರಾಹಕರಿಗೆ ಸಾಧ್ಯವಾಗುವುದಿಲ್ಲ. ಎಸ್‌ಬಿಐನ ಕ್ಲಾಸಿಕ್‌ ಮತ್ತು ಮಾಯಿಸ್ಟ್ರೋ ಕಾರ್ಡ್‌ ಬಳಕೆದಾರರಿಗೆ ಈ ನಿಯಮ ಅನ್ವಯವಾಗಲಿದೆ.

ದೀಪಾವಳಿಗೂ ಹಬ್ಬಕ್ಕೂ ಮುನ್ನ ಜಾರಿಗೆ ಬರುತ್ತಿರುವ ಈ ಕ್ರಮ, 42 ಕೋಟಿ ಎಸ್‌ಬಿಐ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ 20 ಸಾವಿರ ರು.ಗಿಂತ ಅಧಿಕ ಮೊತ್ತವನ್ನು ಎಟಿಎಂನಿಂದ ಹಿಂಪಡೆಯುವ ಆಸೆ ಇದ್ದಲ್ಲಿ ಉನ್ನತ ಶ್ರೇಣಿಯ ಡೆಬಿಟ್‌ ಕಾರ್ಡ್‌ಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಎಸ್‌ಬಿಐ ಗ್ರಾಹಕರು ದಿನವೊಂದಕ್ಕೆ ಸರಾಸರಿ 20 ಸಾವಿರ ರು.ಗಿಂತ ಕಡಿಮೆ ಹಣವನ್ನು ಎಟಿಎಂ ಮೂಲಕ ಪಡೆಯುತ್ತಿದ್ದಾರೆ. ನಕಲಿ ಎಟಿಎಂ ಕಾರ್ಡ್‌ ಸೃಷ್ಟಿಸಿ ವಂಚಿಸುವವರು ಸಾಮಾನ್ಯವಾಗಿ ಗರಿಷ್ಠ ಮಿತಿಯಾದ 40 ಸಾವಿರ ರು. ಅನ್ನು ಬಳಸಿಕೊಳ್ಳುತ್ತಿದ್ದರು. ಹೀಗಾಗಿ ಆ ವಂಚನೆ ತಡೆಗಟ್ಟಲು, ಡಿಜಿಟಲ್‌ ವಹಿವಾಟು ಉತ್ತೇಜಿಸಲು ಹಣ ಹಿಂಪಡೆಯುವ ಮಿತಿಯನ್ನು ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!