
ಹೈದ್ರಾಬಾದ್: ಚುನಾವಣೆ ವೇಳೆ ಅಭ್ಯರ್ಥಿಗಳು ಮತ ದಾರರ ಸೆಳೆಯಲು ಏನೆಲ್ಲಾ ಹೊಸ ತಂತ್ರಕ್ಕೆ ಕಾಯುತ್ತಾರೆ ಎಂಬುದಕ್ಕೆ ತೆಲಂಗಾಣದಲ್ಲಿ ಉದಾಹರಣೆ ಸಿಕ್ಕಿದೆ.
ರಾಜ್ಯದಲ್ಲಿ ಟಿಡಿಪಿ, ಕಾಂಗ್ರೆಸ್, ಸಿಪಿಐ ಮೈತ್ರಿಯಿಂದ ವಿಚಲಿತವಾಗಿರುವ ಟಿಆರ್‌ಎಸ್ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಶ್ರಮಜೀವಿಗಳಿಗೆ ನೆರವಾಗಿ ಎಂಬ ಅಭಿಯಾನ ಆರಂಭಿಸಿದ್ದಾರೆ.
ಈ ನಿಟ್ಟಿನಲ್ಲಿ ಟಿಆರ್‌ಎಸ್ ಅಭ್ಯರ್ಥಿಗಳು ಕ್ಷೌರದ ಅಂಗಡಿಗೆ ತಾವೇ ಜನರಿಗೆ ಕ್ಷೌರ ಮಾಡುವ, ಐರನ್ ಶಾಪ್‌ಗೆ ಹೋಗಿ ತಾವೇ ಐರನ್, ಕಟ್ಟಡ ನಿರ್ಮಾಣ ಸ್ಥಳಕ್ಕೆ ಮರಳು ಸೋಸುವ, ರಸ್ತೆ ಬದಿಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯ ಮೈಗೆ ನೀರು ಹೊಯ್ದು ತಾವೇ ಸ್ನಾನ ಮಾಡಿಸಿ ಗಮನ ಸೆಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.