ಸೌದಿ ಮಹಿಳೆಯರು ಮ್ಯಾಗಜಿನ್ ಓದಲೂ ಸ್ವತಂತ್ರರಲ್ಲ!

Published : Jun 28, 2018, 05:36 PM IST
ಸೌದಿ ಮಹಿಳೆಯರು ಮ್ಯಾಗಜಿನ್ ಓದಲೂ ಸ್ವತಂತ್ರರಲ್ಲ!

ಸಾರಾಂಶ

ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ ಮಹಿಳಾ ಚಾಲಕಿಯರ ಮೇಲಿನ ದಶಕಗಳ ನಿರ್ಬಂಧ ಕೊನೆಗೂ ಅಂತ್ಯಗೊಳಿಸಿದೆ. ಮಹಿಳೆಯರಿಗೆ ವಾಹನಗಳನ್ನು ಚಲಾಯಿಸಲು ಅವಕಾಶ ನೀಡಿದೆ. ಹಲವು ದಶಕಗಳಿಂದ ಕಟ್ಟರ್ ಮುಸ್ಲಿಂ ಸಂಪ್ರದಾಯಗಳ ನೆರಳಲ್ಲೇ ಅಸ್ತಿತ್ವ ಉಳಿಸಿಕೊಂಡಿದ್ದ ಸೌದಿಯಲ್ಲೀಗ ಬದಲಾವಣೆಯ ಗಾಳಿ ಬೀಸಿದೆ. ಈ ಹಿನ್ನೆಲೆಯಲ್ಲಿ ಸೌದಿಯಲ್ಲಿ ಮಹಿಳೆಯರ ಬಗೆಗಿನ ಬಿಗಿ ನಿಯಮಗಳು ಸಡಿಲಗೊಳ್ಳುತ್ತಿರುವುದೇಕೆ? ಇತ್ತೀಚೆಗಿನ ಬದಲಾವಣೆಗಳಾವು? ಬದಲಾವಣೆಗೆ ಕಾರಣ ಯಾರು? ಈ ಕುರಿತ ಮಾಹಿತಿ ಇಲ್ಲಿದೆ.

ಮಹಿಳೆಯರು ಡ್ರೈವಿಂಗ್ ಮಾಡುವಂತಿಲ್ಲ ಎಂಬ ನಿರ್ಬಂಧವಿದ್ದ ಏಕೈಕ ರಾಷ್ಟ್ರ ಎಂಬ ಹಣೆಪಟ್ಟಿ ಧರಿಸಿದ್ದ ಸೌದಿ ಅರೇಬಿಯಾ ಸದ್ಯ ತನ್ನ ಕಠಿಣ ನಿಯಮವನ್ನು ಸಡಿಲಿಸುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆದಿದೆ. ಆದರೆ ಈ ಗೆಲುವು ದಶಕಗಳ ಹೋರಾಟದ ಫಲಶ್ರುತಿ. ದೇಶದಲ್ಲಿದ್ದ ಈ ನಿಯಮವನ್ನು ಖಂಡಿಸಿ 1990 ರಲ್ಲಿಯೇ ರಿಯಾದ್‌ನಲ್ಲಿ ವಾಹನ ಚಾಲನೆ ಮಾಡಿದ್ದ ಹಲವು ಮಹಿಳೆಯರನ್ನು ಬಂಧಿಸಲಾಗಿತ್ತು. ಇನ್ನು 2008, 2011 ಹಾಗೂ 2014  ರಲ್ಲಿ ಕೆಲವು ಮಹಿಳೆಯರು ತಾವು ಡ್ರೈವಿಂಗ್ ಮಾಡುವ ವಿಡಿಯೋಗಳನ್ನು ಪೋಸ್ಟ್ ಮಾಡಲು ಆರಂಭಿಸಿದ್ದರು. ಬಳಿಕ ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ದವು. 

ಸೌದಿ ಯಾಕೆ ತನ್ ಬಿಗಿ ನಿಯಮ ಸಡಿಲಿಸುತ್ತಿದೆ? 

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗಾಗಿಯೇ ಹೆಚ್ಚು ಹೆಚ್ಚು ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಸೌದಿ ಅರೇಬಿಯಾ ಪ್ರಪಂಚದಲ್ಲಿಯೇ ಅತಿ ಸಂಪ್ರದಾಯವಾದಿ ರಾಷ್ಟ್ರಗಳಲ್ಲೊಂದು. ಹಾಗಿದ್ದ ಮೇಲೆ ಇತ್ತೀಚೆಗೆ ಸೌದಿ ಏಕೆ ಮಹಿಳೆಯರಿಗೆ ಮೇಲಿದ್ದ ನಿರ್ಬಂಧವನ್ನು ಸಡಿಲಿಸುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ. ಈ ಕುರಿತು ನಡೆಸಿದ ಸಂಶೋಧನೆಯೊಂದರಲ್ಲಿ ದೇಶದ ಆರ್ಥಿಕತೆಯನ್ನು ಬಲಪಡಿಸಲು ಸೌದಿ ಈ ರೀತಿಯ ನಿರ್ಣಯ ತೆಗೆದುಕೊಳ್ಳುತ್ತಿದೆ ಎಂದು ವಾದಿಸಲಾಗಿದೆ.  ಮಹಿಳೆಯರು ಮತ್ತು ಪುರುಷರು ಹೊರಬಂದು ದುಡಿದಾಗ ದೇಶದ ಆರ್ಥಿಕತೆಯಲ್ಲಿ ಮೇಲ್ಮುಖವಾಗಿ ಸಾಗಬಹುದು ಎಂಬ ಆಲೋಚನೆ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಸೌದಿ ಸ್ತ್ರೀಯರು ಇನ್ನೂ ಪೂರ್ಣ ಸ್ವತಂತ್ರರಲ್ಲ

ಪುರುಷ ಗಾರ್ಡಿಯನ್ ಅನುಮತಿ ಇಲ್ಲದೆಯೇ ಬ್ಯಾಂಕ್ ಅಕೌಂಟ್ ತೆರೆಯುವಂತಿಲ್ಲ.

ಪಾಸ್‌ಪೋರ್ಟ್ ಹೊಂದುವಂತಿಲ್ಲ, ವಿದೇಶಕ್ಕೆ ತೆರಳುವಂತಿಲ್ಲ.

ಮದುವೆ ಅಥವಾ ಡಿವೋರ್ಸ್‌ಗೆ ಗಂಡನ ಅನುಮತಿ ಬೇಕು.

ಪುರುಷರೊಂದಿಗೆ ಹೆಚ್ಚು ಹೊರಗಡೆ ಕಾಣಿಸಿಕೊಳ್ಳುವಂತಿಲ್ಲ.

ಸಂಪೂರ್ಣ ಮೈಮುಚ್ಚುವಂತೆಯೇ ಬಟ್ಟೆ ತೊಡಬೇಕು.

ಸೌದಿ ಮಹಿಳೆಯರು ಪುರುಷರಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಪಡೆಯುವಂತಿಲ್ಲ.

ಸೆನ್ಸಾರ್‌ಗೆ ಒಳಪಡಿಸದ ಫ್ಯಾಷನ್ ಮ್ಯಾಗಜಿನ್‌ಗಳನ್ನು ಮಹಿಳೆಯರು ಓದುವಂತಿಲ್ಲ 

ಒಲಂಪಿಕ್‌ನಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ.

ಸೌದಿ ಮಹಿಳೆಯರಿಗೆ ಸಾರ್ವಜನಿಕ ಈಜುಕೊಳಕ್ಕೆ ಪ್ರವೇಶವಿಲ್ಲ. ಕೇವಲ ಖಾಸಗಿ ಈಜುಕೊಳ, ಜಿಮ್, ಸ್ಪಾಗಳಿಗೆ ಹೋಗಬಹುದಷ್ಟೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ