ಜಮೀರ್‌ಗೆ ಮಾತ್ರ ಅಲ್ಲ ಇವರಿಗೂ ಕೊಟ್ಟ ಕಾರ್‌ ಬೇಡ್ವಂತೆ!

First Published Jun 28, 2018, 4:41 PM IST
Highlights

ಕೇಂದ್ರ ಸರಕಾರ ಒಂದು ಉತ್ತಮ ಆಲೋಚನೆ ಇಟ್ಟುಕೊಂಡು ಇಂಧನ ಉಳಿತಾಯ ಮಾಡಬೇಕು ಎಂದು ಮುಂದಾಗಿದ್ದರೆ ಅಧಿಕಾರಿಗಳು ಅಸಡ್ಡೆ ತೋರಿಸಿದ್ದಾರೆ. ಇಲ್ಲಿ ಅಧಿಕಾರಿಗಳ ಅಸಡ್ಡೆ ಎನ್ನುವುದಕ್ಕಿಂತ ಯೋಜನೆ ಅನುಷ್ಠಾನದಲ್ಲಿನ ಸಮಸ್ಯೆ ಮೂಲ ಕಾರಣ ಎನ್ನಬಹುದು. ಹಾಗಾದರೆ ಏನು ಈ ಕತೆ ... ಮುಂದೆ ಓದಿ

ನವದೆಹಲಿ[ಜೂ.28]  ಮಂತ್ರಿಗಿರಿ ತೋರಿಸಲು ಫಾರ್ಚುನರ್ ಕಾರು ಕೇಳಿದ್ದ ಜಮೀರ್ ಅಹಮದ್ ಖಾನ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ವಾಹಿನಿಗಳಿಗೆ ಆಹಾರವಾಗಿದ್ದರು. ಆದರೆ ಜಮೀರ್ ಅವರಿಗೆ ಮಾತ್ರ ಅಲ್ಲ ಅವರಂತೆ ಕಾರು ಶೋಕಿ ಇರುವ ಅಧಿಕಾರಿಗಳು ಇದ್ದಾರೆ. ನಮ್ಮ ರಾಜ್ಯದವರು ಅಲ್ಲದೆ ಇರಬಹುದು. ಆದರೆ ಜನರ ದುಡ್ಡಿನಲ್ಲಿ ಕಾರಿನಲ್ಲಿ ಓಡಾಡಲು ಬಯಸುವ ಇವರ ಕತೆ ಕೇಳಲೇಬೇಕು.

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಟಾಟಾ ಕಂಪನಿಯ ವಿದ್ಯುತ್ ಚಾಲಿತ ಕಾರುಗಳನ್ನು ಬಳಸಲು ರಾಜಧಾನಿ ದೆಹಲಿಯ ಹಿರಿಯ ಅಧಿಕಾರಿಗಳು ಒಪ್ಪಿಕೊಳ್ಳುತ್ತಿಲ್ಲವಂತೆ. ಕೇಂದ್ರ ಇಂಧನ ಇಲಾಖೆಯ ಮಾನ್ಯತೆಗೆ ಒಳಪಟ್ಟ ಕಾರುಗಳನ್ನು ನೀಡಿದರು ಅಧಿಕಾರಿಗಳು ಬಳಕೆಗೆ ಹಿಂದೇಟು ಹಾಕಿದ್ದಾರೆ. ಚಾರ್ಜಿಂಗ್ ಗೆ ಸಂಬಂಧಿಸಿದ ಉಪಕರಣಗಳ ಕೊರತೆಯೂ ಒಂದು ಪ್ರಮುಖ ಕಾರಣ ಎಂದು ಹೇಳಲಾಗಿದೆ.

ವಿಧಾನಸೌಧದಲ್ಲಿ ಸಚಿವ ಜಮೀರ್ ಗೆ ಜ್ಞಾನೋದಯ!

ಜಾರ್ಜ್ ಹಾಕಿದ ನಂತರ ನಿರಂತರವಾಗಿ 80 ರಿಂದ 82 ಕಿಮೀ ಮಾತ್ರ ಓಡಬಲ್ಲ ವಾಹನಗಳು ಇವಾಗಿವೆ. ಬ್ಯಾಟರಿ ಸಹ ಗುಣಮಟ್ಟ ಹೊಂದಿಲ್ಲ. ಜಾಗತಿಕ ಮಟ್ಟಕ್ಕೆ ಹೋಲಿಕೆ ಮಾಡಿದರೆ ಇವು ಅತಿ ಕಳಪೆ ಸಾಮಗ್ರಿಗಳಾಗಿವೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳಿದರು. ಒಟ್ಟಿನಲ್ಲಿ  ಪರಿಸರ ಮತ್ತು ಇಂಧನ ಉಳಿತಾಯಕ್ಕೆ ಕೇಂದ್ರ ಸರಕಾರ ಹೆಜ್ಜೆ ಇಟ್ಟಿದ್ದ ಕೇಂದ್ರ ಸರಕಾರದ ಗುರಿ ಸಾಧನೆಗೆ ಅನುಷ್ಠಾನದಲ್ಲಿನ ಕೊರತೆಗಳು ಅಡ್ಡ ಬಂದಿವೆ.

click me!