ಅಸಭ್ಯ ಧಿರಿಸು ಆರೋಪ: ಟ್ರೋಲ್ ಗೆ ಬೇಸತ್ತು ದೇಶ ಬಿಟ್ಟ ವರದಿಗಾರ್ತಿ!

First Published Jun 28, 2018, 3:58 PM IST
Highlights

ಕ್ಯಾಮರಾ ಮುಂದೆ ವರದಿಗಾರ್ತಿ ಅಸಭ್ಯ ಬಟ್ಟೆ ಧರಿಸಿದ ಆರೋಪ

ಸೌದಿ ವರದಿಗಾರ್ತಿ ವಿರುದ್ದ ತನಿಖೆಗೆ ಆದೇಶ

ಸೌದಿಯ ಅಲ್ ಆನ್ ಸುದ್ದಿವಾಹಿನಿಯ ವರದಿಗಾರ್ತಿ ಶಿರಿನ್

ಟ್ರೋಲ್ ನಿಂದ ಬೇಸತ್ತು ದೇಶ ತೊರೆದ ಶಿರಿನ್

ರಿಯಾದ್(ಜೂ.28): ಸೌದಿ ಅರೇಬಿಯಾದಲ್ಲಿ ಇತ್ತೀಚಿಗಷ್ಟೇ ಮಹಿಳೆಯರಿಗೆ ಚಾಲನಾ ಪರವಾನಗಿಯನ್ನು ಕೊಡಲಾಗಿದೆ. ಅಂದರೆ ಸೌದಿಯಲ್ಲಿ ಇನ್ನು ಮುಂದೆ ಮಹಿಳೆಯರು ವಾಹನ ಓಡಿಸಬಹುದು. ಆದರೆ ಈ ಹೊಸ ನಿಯಮ ಓರ್ವ ಮಹಿಳಾ ವರದಿಗಾರ್ತಿ ದೇಶವನ್ನೇ ಬಿಡುವಂತ ಸನ್ನಿವೇಶ ಸೃಷ್ಟಿಸುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಿರಲಿಲ್ಲ.

ಹೌದು, ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಲಾಯಿಲು ಅನುಮತಿ ನೀಡಲಾಗಿದೆ. ಆದರೆ ಈ ಕುರಿತು ವರದಿ ಮಾಡುತ್ತಿದ್ದ ಶಿರಿನ್ ಅಲ್ ರಿಫಾಯಿ ಎಂಬ ಅಲ್ ಆನ್ ಟಿವಿ ವರದಿಗಾರ್ತಿ, ಕ್ಯಾಮರಾ ಮುಂದೆ ಅಸಭ್ಯ ಬಟ್ಟೆ ಧರಿಸಿ ವರದಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

General Authority for Audiovisual Media investigates anchor Shereen Rifai “for violating regulations and instructions” by “wearing indecent clothing” during a report she present on ending the ban on women driving in according to Okaz newspaper pic.twitter.com/3PDvRwVe2q

— Zaid Benjamin (@zaidbenjamin)

ಈ ಕುರಿತು ಸೌದಿ ಸರ್ಕಾರ ಮಹಿಳೆ ವಿರುದದ ತನಿಖೆಗೆ ಆದೇಶ ಕೂಡ ನೀಡಲಾಗಿದೆ. ಶಿರಿನ್ ಧರಿಸಿದ್ದ ಬಟ್ಟೆ ಸೌದಿ ಸಂಪ್ರದಾಯದ ಪ್ರಕಾರ ಅಸಭ್ಯ ಎಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶಿರಿನ್ ವಿರುದ್ದ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಶಿರಿನ್ ಧರಿಸಿದ್ದ ಬಟ್ಟೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಶಿರಿನ್ ವಿರುದ್ದ ತನಿಖೆಗೆ ಆದೇಶ ನೀಡಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕುರಿತು ಅಸಭ್ಯ ಪದ ಬಳಸಿ ನಿಂದಿಸುತ್ತಿರುವದರಿಂದ ನೊಂದಿರುವ ಶಿರಿನ್ ಇದೀಗ ದೇಶ ತೊರೆದಿದ್ದಾರೆ. ತಮ್ಮ ವಿರುದ್ದ ಕೀಳು ಆರೋಪ ಮಾಡುತ್ತಿರುವುದರಿಂದ ಮನನೊಂದು ದೇಶ ತೊರೆಯುತ್ತಿರುವುದಾಗಿ ಶಿರಿನ್ ತಿಳಿಸಿದ್ದಾರೆ.

click me!