ಸಿಎಂ ವಿರುದ್ಧ ಸತೀಶ್ ಜಾರಕಿಹೊಳಿ ಗರಂ

By Web DeskFirst Published Aug 1, 2018, 8:58 AM IST
Highlights

ಪ್ರತ್ಯೇಕ ರಾಜ್ಯ ವಿಚಾರವಾಗಿ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಲ್ಲ. ಅವರು ಕೇವಲ ರಾಮನಗರ ಮುಖ್ಯಮಂತ್ರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಸತೀಶ್  ಜಾರಕಹೊಳಿ ಹೇಳಿದ್ದಾರೆ. 

ಬೆಂಗಳೂರು :  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯಿಂದ ರಾಜ್ಯದ ಸಮಗ್ರತೆಗೆ ಹಾನಿ ಉಂಟಾಗುವಂತಿದ್ದರೆ ಕುಮಾರ ಸ್ವಾಮಿ ಅವರು  ಹೇಳಿಕೆಯನ್ನು ವಾಪಸು ಪಡೆಯಲೇಬೇಕು. ಈ  ಬಗ್ಗೆ ಅವರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕೇವಲ ರಾಮನಗರ, ಚನ್ನಪಟ್ಟಣ ಮುಖ್ಯಮಂತ್ರಿ ಅಲ್ಲ. ಅವರು ಜನರನ್ನು ಪ್ರತ್ಯೇಕಿಸಿ ಹೇಳಿಕೆ ನೀಡಿರುವುದಿಲ್ಲ. ಒಂದು ವೇಳೆ ಅವರ ಹೇಳಿಕೆಯಿಂದ ಹಾನಿ ಉಂಟಾಗುವುದಾದರೆ ವಾಪಸ್ಸು ಪಡೆಯ ಬೇಕು. ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು. ಕುಮಾರಸ್ವಾಮಿ ಹೇಳಿಕೆಯಿಂದ ಲೋಕಸಭೆ ಚುನಾವಣೆಗೆ ಪರಿಣಾಮ ಬೀರಲ್ಲ. 

ಒಂದು ವೇಳೆ ಆದರೆ, ಡ್ಯಾಮೇಜ್ ಕಂಟ್ರೋಲ್ ಮಾಡಲು ಪರ್ಯಾಯವಾಗಿ ಏನು ಮಾಡಬಹುದು ಎಂಬುದನ್ನು ನೋಡುತ್ತೇವೆ. ಜೆಪಿಯವರೂ ಇದನ್ನು ಅಸ್ತ್ರ ವಾಗಿ ಬಳಸುವುದಿಲ್ಲ. ಒಂದು ವೇಳೆ ಬಳಸಿದರೆ ಅವರಿಗೆ ಮಾರಕವಾಗಲಿದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.  ಉತ್ತರ ಕರ್ನಾಟಕ ಜನತೆಗೆ ಸಮ್ಮಿಶ್ರ ಸರ್ಕಾರದಲ್ಲಿ ಅನ್ಯಾಯವಾಗಿದೆ ಎಂಬ ಮಾತಿದೆ. ಈ ಸರ್ಕಾರದಲ್ಲಿ ಮಂಡನೆಯಾಗಿರುವುದು ಎರಡು ಬಜೆಟ್. ನಾನು ಕುಮಾರಸ್ವಾಮಿ ಅವರ ಬಜೆಟ್ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ಹಾಗೂ ಅನುದಾನ ನೀಡಿದ್ದಾರೆ ಎಂದು ಹೇಳಿದರು. ಈ ಮೂಲಕ ಕುಮಾರಸ್ವಾಮಿ ಬಜೆಟ್ ಬಗ್ಗೆ 
ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

click me!