ಲಂಚ ನೀಡಿದ್ರೆ ಹುಷಾರ್ : ಜೈಲು ಸೇರ್ತೀರಾ

By Web DeskFirst Published Aug 1, 2018, 8:15 AM IST
Highlights

ಲಂಚ ಸ್ವೀಕಾರ ಮಾಡಿದರಷ್ಟೇ ಅಲ್ಲದೇ ಇನ್ನು ಮುಂದೆ ಲಂಚ ಕೊಟ್ಟರೂ ಕೂಡ ಜೈಲು ಶಿಕ್ಷೆ ವಿಧಿಸುವ ಹೊಸ ಕಾನೂನನ್ನು ಜಾರಿ ಮಾಡಲಾಗಿದೆ.  ಲಂಚ ನೀಡಿದರೆ ಒಟ್ಟು 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 

ನವದೆಹಲಿ: ಲಂಚ ಪಡೆದವರಿಗೆ ಶಿಕ್ಷೆ ನೀಡುವಂತೆ, ಲಂಚ ನೀಡಿದವರಿಗೂ ಗರಿಷ್ಠ 7  ವರ್ಷಗಳವರೆಗೆ ಜೈಲು ಶಿಕ್ಷೆ ನೀಡಬಹುದಾದ ಕಾನೂನು ಅಧಿಕೃತವಾಗಿ ಜಾರಿಗೆ ಬಂದಿದೆ. ಇತ್ತೀಚೆಗೆ ಸಂಸತ್ತಿನ ಅನುಮೋದನೆ ಪಡೆದಿದ್ದ ಮಸೂದೆಗೆ ಇದೀಗ ರಾಷ್ಟ್ರಪತಿ ಕೋವಿಂದ್ ಸಹಿಹಾಕಿದ್ದು, ಅದು ಕಾಯ್ದೆ ಸ್ವರೂಪ ಪಡೆದುಕೊಂಡಿದೆ. 

ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) 1988 ರ ಕಾಯ್ದೆ ಅನ್ವಯ ಇನ್ನು ಮುಂದೆ ಲಂಚ ಸ್ವೀಕರಿಸಿದಷ್ಟೇ, ಲಂಚ ನೀಡುವುದು ಕೂಡಾ ಅಪರಾಧವಾಗಲಿದೆ.  ಇತ್ತೀಚೆಗೆ ಸಂಸತ್ತಿನ ಅನುಮೋದನೆ ಪಡೆದಿದ್ದ ಮಸೂದೆಗೆ ಇದೀಗ ರಾಷ್ಟ್ರಪತಿ ಕೋವಿಂದ್ ಸಹಿಹಾಕಿದ್ದು, ಅದು ಕಾಯ್ದೆ ಸ್ವರೂಪ ಪಡೆದುಕೊಂಡಿದೆ. 

ಇದೇ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಬ್ಯಾಂಕ್‌ರ್ ಗಳನ್ನು ವಿಚಾರಣೆಗೆ ಗುರಿಪಡಿಸುವ ಮುನ್ನ  ಸರ್ಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳುವುದನ್ನು ಹೊಸ ಕಾಯ್ದೆಯಡಿ ಕಡ್ಡಾಯಗೊಳಿಸಲಾಗಿದೆ. ಅಧಿಕಾರದಲ್ಲಿದ್ದಾಗ ಕೈಗೊಂಡ ನಿರ್ಣಯಗಳಿಗೆ, ಯಾರನ್ನೂ ಮುಂದಿನ ದಿನಗಳಲ್ಲಿ ಯಾರೂ ಬಲಿ ಪಶು ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ರೀತಿಯ ರಕ್ಷಣೆ ಒದಗಿಸಿದೆ. ಈ ನಿಯಮ ನಿವೃತ್ತ ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಅನ್ವಯವಾಗುತ್ತದೆ.

click me!