`ನನ್ನೆಂಡ್ತಿ 30 ವರ್ಷ ಜಯಲಲಿತಾರನ್ನ ಪೋಷಿಸಿದ್ದಾಳೆ, ನಾವೇಕೆ ರಾಜಕೀಯಕ್ಕೆ ಬರಬಾರದು'

Published : Jan 17, 2017, 10:42 AM ISTUpdated : Apr 11, 2018, 12:49 PM IST
`ನನ್ನೆಂಡ್ತಿ 30 ವರ್ಷ ಜಯಲಲಿತಾರನ್ನ ಪೋಷಿಸಿದ್ದಾಳೆ, ನಾವೇಕೆ ರಾಜಕೀಯಕ್ಕೆ ಬರಬಾರದು'

ಸಾರಾಂಶ

`ಎಂಜಿಆರ್ ನಿಧನದ ಬಳಿಕ ಜಯಲಲಿತಾರನ್ನ ರಕ್ಷಿಸುವಲ್ಲಿ ನಮ್ಮ ಕುಟುಂಬ ಮಹತ್ವದ ಪಾತ್ರ ವಹಿಸಿದೆ. 30 ವರ್ಷ ನನ್ನೆಂಡ್ತಿ ಶಶಿಕಲಾ ಜಯಲಲಿತಾರನ್ನ ರಕ್ಷಿಸಿದ್ದಾರೆ. ಎಂಜಿಆರ್ ಮೃತದೇಹವನ್ನೂ ನೋಡಲು ಬಿಡದೆ ಮೆರವಣಿಗೆ ವಾಹನದಿಂದ ಹೊರದಬ್ಬಲಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ಜಯಲಲಿತಾ ಬೆಂಬಲಕ್ಕೆ ನಿಂತು ರಕ್ಷಣೆ ನೀಡಿದೆವು. ಮೇಲ್ವರ್ಗದವರು ಜಯಲಲಿತಾ ಸಿಎಂ ಆಗುವುದನ್ನ ವಿರೋಧಿಸಿದ್ದರೂ ನಾವು ಅವರ ಬೆಂಬಲಕ್ಕೆ ನಿಂತು ಸಿಎಂ ಮಾಡಿದೆವು' ಎಂ. ನಟರಾಜನ್ ಹೇಳಿದ್ದಾರೆ.

ತಿರುಚಿರಪಳ್ಳಿ(ಜ.17): ನನ್ನೆಂಡ್ತಿ 30 ವರ್ಷ ಜಯಲಲಿತಾರನ್ನ ಪೋಷಿಸಿದ್ದಾಳೆ. ಅಂತಹುದರಲ್ಲಿ ನಮ್ಮ ಕುಟುಂಬದವರು ರಾಜಕೀಯಕ್ಕೆ ಬರುವುದರಲ್ಲಿ ಯಾವುದೇ ತಪ್ಪಿಲ್ಲ ೆಂದು ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪತಿ ಎಂ. ನಟರಾಜನ್ ಹೇಳಿದ್ಧಾರೆ.

`ಎಂಜಿಆರ್ ನಿಧನದ ಬಳಿಕ ಜಯಲಲಿತಾರನ್ನ ರಕ್ಷಿಸುವಲ್ಲಿ ನಮ್ಮ ಕುಟುಂಬ ಮಹತ್ವದ ಪಾತ್ರ ವಹಿಸಿದೆ. 30 ವರ್ಷ ನನ್ನೆಂಡ್ತಿ ಶಶಿಕಲಾ ಜಯಲಲಿತಾರನ್ನ ರಕ್ಷಿಸಿದ್ದಾರೆ. ಎಂಜಿಆರ್ ಮೃತದೇಹವನ್ನೂ ನೋಡಲು ಬಿಡದೆ ಮೆರವಣಿಗೆ ವಾಹನದಿಂದ ಹೊರದಬ್ಬಲಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ಜಯಲಲಿತಾ ಬೆಂಬಲಕ್ಕೆ ನಿಂತು ರಕ್ಷಣೆ ನೀಡಿದೆವು. ಮೇಲ್ವರ್ಗದವರು ಜಯಲಲಿತಾ ಸಿಎಂ ಆಗುವುದನ್ನ ವಿರೋಧಿಸಿದ್ದರೂ ನಾವು ಅವರ ಬೆಂಬಲಕ್ಕೆ ನಿಂತು ಸಿಎಂ ಮಾಡಿದೆವು' ಎಂ. ನಟರಾಜನ್ ಹೇಳಿದ್ದಾರೆ.

`ಓ ಪನ್ನಿರ್ ಸೆಲ್ವಂ ಅವರು ವೃತ್ತಿಪರತೆಯಿಂದ ಸರ್ಕಾರವನ್ನ ಸುಕಕಿತವಾಗಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬದಲಾವಣೆ ಅಗತ್ಯ ಇಲ್ಲ. ಒಂದೊಮ್ಮೆ ಬದಲಾವಣೆ ಸಂದರ್ಭ ಎದುರಾದರೆ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ನಟರಾಜನ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!