ಝೈರಾ ಬೆಂಬಲಕ್ಕೆ ನಿಂತ ಅಮಿರ್ ಖಾನ್

Published : Jan 17, 2017, 10:10 AM ISTUpdated : Apr 11, 2018, 12:40 PM IST
ಝೈರಾ ಬೆಂಬಲಕ್ಕೆ ನಿಂತ ಅಮಿರ್ ಖಾನ್

ಸಾರಾಂಶ

“ನಾನು ಝೈರಾ ಹೇಳಿಕೆಯನ್ನು ಓದಿದ್ದೇನೆ. ಆಕೆ ಆ ರೀತಿ ಹೇಳುವುದಕ್ಕೆ ಕಾರಣವೇನೆಂದು ನಾನು ಊಹಿಸಿಕೊಳ್ಳಬಲ್ಲೆ. ಝೈರಾ, ನಾವೆಲ್ಲಾ ನಿನ್ನ ಬೆಂಬಲಕ್ಕಿದ್ದೇವೆ. ಯುವ ಪ್ರತಿಭಾನ್ವಿತ, ಶ್ರಮಜೀವಿ, ಧೈರ್ಯವಂತ ನಿನ್ನಂತ ಮಕ್ಕಳು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ರೋಲ್ ಮಾಡೆಲ್. ನೀನು ನಿಜವಾಗಿಯೂ ನನಗೆ ರೋಲ್ ಮಾಡೆಲ್! ದೇವರ ಆಶೀರ್ವಾದವಿರಲಿ” ಎಂದು ಅಮೀರ್ ಖಾನ್ ಹೇಳಿದ್ದಾರೆ.  

ನವದೆಹಲಿ (ಜ.17): ‘ದಂಗಾಲ್’ ಚಿತ್ರದ ನಟಿ ಝೈರಾ ವಾಸಿಮ್ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯನ್ನು ಭೇಟಿ ಮಾಡಿದ್ದು, ಮುಫ್ತಿಯವರು ಆಕೆಯನ್ನು ಕಾಶ್ಮೀರದ ರೋಲ್ ಮಾಡೆಲ್ ಎಂದು ಕರೆದಿದ್ದು ವಿವಾದವಾಗಿದೆ. ಅದಕ್ಕಾಗಿ ಆಕೆ ಕ್ಷಮೆ ಯಾಚಿಸಿದ್ದು ಆಕೆಗೆ ಹಲವಾರು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೀರ್ ಖಾನ್ ಕೂಡಾ ಇದೀಗ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.

“ನಾನು ಝೈರಾ ಹೇಳಿಕೆಯನ್ನು ಓದಿದ್ದೇನೆ. ಆಕೆ ಆ ರೀತಿ ಹೇಳುವುದಕ್ಕೆ ಕಾರಣವೇನೆಂದು ನಾನು ಊಹಿಸಿಕೊಳ್ಳಬಲ್ಲೆ. ಝೈರಾ, ನಾವೆಲ್ಲಾ ನಿನ್ನ ಬೆಂಬಲಕ್ಕಿದ್ದೇವೆ. ಯುವ ಪ್ರತಿಭಾನ್ವಿತ, ಶ್ರಮಜೀವಿ, ಧೈರ್ಯವಂತ ನಿನ್ನಂತ ಮಕ್ಕಳು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ರೋಲ್ ಮಾಡೆಲ್. ನೀನು ನಿಜವಾಗಿಯೂ ನನಗೆ ರೋಲ್ ಮಾಡೆಲ್! ದೇವರ ಆಶೀರ್ವಾದವಿರಲಿ” ಎಂದು ಅಮೀರ್ ಖಾನ್ ಹೇಳಿದ್ದಾರೆ.  

ಝೈರಾ ಇನ್ನೂ 16 ರ ಹರೆಯದ ಹುಡುಗಿ. ಅವಳ ಜೀವನವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಸತ್ಯಾಂಶವನ್ನು ಗೌರವಿಸಿ. ಆಕೆಯನ್ನು ಅವಳ ಪಾಡಿಗೆ ಬಿಡಿ ಎಂದು ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುತ್ತೇನೆ ಎಂದು ಅಮೀರ್ ಖಾನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪರಿಷತ್‌ನಲ್ಲಿ ಮಧುಗೆ ಮೆಚ್ಚುಗೆ: 'ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ?' ಕಾಲೆಳೆದ ಸಿಟಿ ರವಿ!
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!