
ಚೆನ್ನೈ(ಫೆ.10): ಶಶಿಕಲಾ ನಟರಾಜನ್'ಗೆ ಮದ್ರಾಸ್ ಹೈ ಕೋರ್ಟ್'ನಿಂದ ಭಾರೀ ಹಿನ್ನಡೆಯಾಗಿದೆ. ಶಾಸಕರನ್ನು ಕೂಡಿ ಹಾಕಿರುವ ವಿಚಾರವಾಗಿ ತನಿಖೆ ನಡೆಸಿ ಅಫಿಡವಿಟ್ ಸಲ್ಲಿಸಲು ಮದ್ರಾಸ್ ಉಚ್ಛ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ.
ಸಿಎಂ ಕನಸು ಕಂಡಿದ್ದ ಶಶಿಕಲಾ ನಟರಾಜನ್'ಗೆ ಒಂದಾದ ಬಳಿಕ ಒಂದರಂತೆ ಸಂಕಷ್ಟಗಳು ತಲೆದೋರುತ್ತಿವೆ. ಚಿನ್ನಮ್ಮ AIADMK ಅಕ್ರಮವಾಗಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಮದ್ರಾಸ್ ಹೈಕೋರ್ಟ್'ಗೆ ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮದ್ರಾಸ್ ಹೈ ಕೋರ್ಟ್ ಈ ವಿಚಾರವಾಗಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ.
ನಿನ್ನೆಯಷ್ಟೇ ಇದೇ ವಿಚಾರವಾಗಿ ಪನ್ನೀರ್ ಸೆಲ್ವಂ ಶಾಸಕರನ್ನು ಕೂಡಿ ಹಾಕಿರುವ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳುವಂತೆ ಚೆನ್ನೈ ಪೊಲೀಸರಿಗೆ ಆದೇಶ ನೀಡಿದ್ದರು. ಆದರೆ ಪೊಲೀಸ್ ಆಯುಕ್ತರು ಆದೇಶವನ್ನು ವಿರೋಧಿಸಿದಾಗ ಅವರನ್ನು ಬದಲಾಯಿಸಲು ಮುಂದಾಗಿದ್ದರು. ಆದರೀಗ ಈ ಬೆಳವಣಿಗೆಗಳ ನಡುವೆ ಇದೇ ವಿಚಾರವಾಗಿ ಮದ್ರಾಸ್ ಉಚ್ಛ ನ್ಯಾಯಾಲಯ ಕೂಡಾ ತನಿಖೆ ನಡೆಸಲು ಪೊಲೀಸರ ಮೇಲೆ ಒತ್ತಡ ಹೇರಿದೆ.
ಇದೀಗ ಹೈಕೋರ್ಟ್'ನ ಈ ನಡೆಯಿಂದ ಶಶಿಕಲಾ ನಟರಾಜನ್'ರ ರೆಸಾರ್ಟ್ ರಾಜಕೀಯಕ್ಕೆ ಹಿನ್ನಡೆಯಾಗಿದೆ. ಅಲ್ಲದೆ ಅವರ ಕನಸಿಗೆ ತಣ್ಣೀರೆರಚಿದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.